‘ಕರ್ನಾಟಕ ನಮ್ ವೆಲ್ಕಮ್ ಮಾಡಿ‘ ಎಂಬ ದಬಾಂಗ್ 3 ಚಿತ್ರದ ಕನ್ನಡದ ಟ್ರೇಲರ್ನಲ್ಲಿನ ಸಲ್ಮಾನ್ ಖಾನ್ ಅವರ ಕನ್ನಡ ಟ್ರೋಲ್ ಆಗಿತ್ತು.ಈಗ ಅದರಲ್ಲಿರುವ ತಪ್ಪುಗಳು ಟ್ರೋಲಿಗರಿಗೆ ಆಹಾರವಾಗಿದೆ.

ಅದೇನಪ್ಪ ಟ್ರೇಲರ್ನಲ್ಲಿರುವ ತಪ್ಪು ಎಂದು ಯೋಚಿಸ್ತಿದಿದ್ದೀರಾ? ಡಿಸೆಂಬರ್ 20ರಂದು ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳದಲ್ಲಿ ತೆರೆ ಕಾಣಲಿರುವ ಪ್ರಭುದೇವ ನಿರ್ದೇಶನದ ಈ ಚಿತ್ರದ ಟ್ರೇಲರ್ನಲ್ಲಿ ಕೊನೆಗೆ ಬರುವ ಸ್ಲೈಡ್ನಲ್ಲಿ ಸ್ಪೆಲಿಂಗ್ ಮಿಸ್ಟೇಕ್ಗಳೇ ತುಂಬಿಕೊಂಡಿವೆ ಎಂದು ಟ್ರೋಲಿಗರು ಕಾಲೆಳೆದಿದ್ದಾರೆ.

ಸಿನಿಮಾಗಾಗಿ ಕೆಲಸ ಮಾಡಿದವರ ವಿವರವನ್ನು ಹೊಂದಿರುವ ಕೊನೆಯ ಸ್ಲೈಡ್ನಲ್ಲಿ ಡಿಸೆಂಬರ್ (decemeber) ಸ್ಪೆಲಿಂಗ್ಅನ್ನು ತಪ್ಪಾಗಿ ಬರೆಯಲಾಗಿದೆ. ಜೊತೆಗೆ ಸಲ್ಮಾನ್ ಖಾನ್ (salma Khan) ಹೆಸರನ್ನೂ ತಪ್ಪಾಗಿ ಬರೆದಿದ್ದಕ್ಕೆ ಟ್ರೋಲಿಗರುRIP - English, ಫಿಸಿಕ್ಸ್ ಆಯ್ತು ಈಗ ಇಂಗ್ಲಿಷ್ನ ಸರದಿ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ಕನ್ನಡದಲ್ಲೂ ನಟಿಸಲು ಸಿದ್ಧ ಎಂದ ಸಲ್ಮಾನ್ ಖಾನ್

ಇಷ್ಟೇ ಅಲ್ಲ ನಮ್ಮ ಸಲ್ಲು, ಲಿಂಗ ಪರಿವರ್ತಿಸಿಕೊಂಡಿದ್ದಾರೆಯೇ ಎಂದು ಕೆಲವರು ಹಾಸ್ಯ ಮಾಡಿದ್ದು, ಮತ್ತಷ್ಟು ಮಂದಿ ಇದನ್ನು ನೋಡಿ ಇಂಗ್ಲಿಷ್ಗೆ ನಾಚಿಕೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

‘ಒಬ್ಬ ಪೊಲೀಸ್ ಆದ್ರೆ; ಇನ್ನೊಬ್ಬ ಗೂಂಡ. ಇಬ್ಬರೂ ಒಬ್ಬನೇ ಆದ್ರೆ ಗೂಂಡಾ ಪೊಲೀಸ್...’, ‘ಹುಟ್ಟುತಾನೆ ಯಾರೂ ರೆಬೆಲ್ ಆಗಲ್ಲ; ಅದಕ್ಕೊಂದು ಕಾರಣ ಇರುತ್ತದೆ’ ಎಂದು ಕನ್ನಡದ ಟ್ರೇಲರ್ನಲ್ಲಿ ಸಲ್ಲು ಅಬ್ಬರಿಸಿದ್ದರು.

ಈ ಸಿನಿಮಾದಲ್ಲಿ ಸಲ್ಲು ಬಾಯ್ಗೆ ವಿಲನ್ ಆಗಿ ಕಿಚ್ಚ ಸುದೀಪ್ ತೆರೆ ಹಂಚಿಕೊಂಡಿದ್ದಾರೆ. ಅವರಿಬ್ಬರನ್ನು ಬೆಳ್ಳಿಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.