ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ ಲೋಕಕ್ಕೆ ವೆಂಕಿ ಮಾಮ

Last Updated 25 ಮೇ 2020, 19:30 IST
ಅಕ್ಷರ ಗಾತ್ರ

ನಟ ವೆಂಕಟೇಶ್‌ ದಗ್ಗುಬಾಟಿ ವೆಬ್‌ಸಿರೀಸ್‌ ಮೂಲಕ ಡಿಜಿಟಲ್‌ ಲೋಕಕ್ಕೆ ಕಾಲಿಡಲಿದ್ದಾರೆ.

ತೆಲುಗು ಭಾಷೆಯ ‘ಅಸುರನ್‌’ ರಿಮೇಕ್‌ ‘ನಾರಪ್ಪ’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ವೆಂಕಟೇಶ್‌ ದಗ್ಗುಬಾಟಿ, ಆ ಚಿತ್ರದ ಕೆಲಸಗಳು ಮುಗಿದ ನಂತರ ಸಹೋದರ ಸುರೇಶ್‌ ಬಾಬು ನಿರ್ಮಾಣದ ವೆಬ್‌ ಸರಣಿಯಲ್ಲಿ ಬಣ್ಣ ಹಚ್ಚಲಿದ್ದಾರೆ.

ವೆಬ್‌ ಸರಣಿ‌ ಬಗ್ಗೆ ಈಗಾಗಲೇ ಸುರೇಶ್‌ ಬಾಬು ಹಾಗೂ ವೆಂಕಟೇಶ್‌ ದಗ್ಗುಬಾಟಿ ಮಾತುಕತೆ ನಡೆಸಿದ್ದಾರೆ. ಈ ವೆಬ್‌ ಸರಣಿಯನ್ನು ‘ನುವ್ವು ನೇನು’ ಖ್ಯಾತಿಯ ತೇಜ ನಿರ್ದೇಶನ ಮಾಡಲಿದ್ದಾರೆ. ಮೇ ತಿಂಗಳೊಳಗೆ ಇದರ ಸ್ಕ್ರಿಪ್ಟ್‌ ಕೆಲಸ ಮುಗಿಯಲಿದೆ. ಲಾಕ್‌ಡೌನ್‌ ಮುಗಿದ ನಂತರ ಇದರ ಬಗ್ಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT