‘ಹಂಬಲ್ ಪೊಲಿಟೀಷಿಯನ್ ನೋಗ್ರಾಜ್’ ಸಿನಿಮಾ ಮುಖಾಂತರ ನಾಯಕನಾಗಿ ಸ್ಯಾಂಡಲ್ವುಡ್ಗೆ ಹೆಜ್ಜೆ ಇಟ್ಟ ನಟ ಡ್ಯಾನಿಶ್ ಸೇಟ್ ಇದೀಗ ‘ಒನ್ ಕಟ್ ಟು ಕಟ್’ ಎನ್ನುತ್ತಾ ತೆರೆ ಮೇಲೆ ಬರುತ್ತಿದ್ದಾರೆ.

ಒಟಿಟಿ ವೇದಿಕೆ ಅಮೆಜಾನ್ ಪ್ರೈಂನಲ್ಲಿ ಫೆ.3ರಿಂದ ಈ ಸಿನಿಮಾ ಪ್ರಸಾರವಾಗಲಿದೆ. ಮೊದಲ ಸಿನಿಮಾದಲ್ಲಿ ‘ನೋಗ್ರಾಜ್’ ಎಂಬ ಪಾತ್ರದಲ್ಲಿ ಪಾಲಿಕೆ ಸದಸ್ಯನಾಗಿ ನಗುವಿನೌತಣ ಬಡಿಸಿದ್ದ ಡ್ಯಾನಿಶ್ ಸೇಠ್, ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರು ಪಿಆರ್ಕೆ ಬ್ಯಾನರ್ನಡಿ ನಿರ್ಮಾಣಗೊಂಡ ‘ಫ್ರೆಂಚ್ ಬಿರಿಯಾನಿ’ಯಲ್ಲಿ ‘ಅಸ್ಗರ್’ ಪಾತ್ರದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದರು. ಇದೀಗ ಕನ್ನಡ ಕಾಮಿಡಿ ಡ್ರಾಮಾ ‘ಒನ್ ಕಟ್ ಟು ಕಟ್’ನಲ್ಲಿ ಕಲಾ ಶಿಕ್ಷಕನಾಗಿ ‘ಗೋಪಿ’ ಎಂಬ ಪಾತ್ರದಲ್ಲಿ ಡ್ಯಾನಿಶ್ ಕಾಣಿಸಿಕೊಳ್ಳಲಿದ್ದಾರೆ.

‘ಸಾಮಾಜಿಕ ಮಾಧ್ಯಮ ಹೋರಾಟಗಾರರು ಒತ್ತಾಯಾಳಾಗಿರಿಸಿಕೊಂಡ ಶಾಲೆಯನ್ನು ಉಳಿಸುವುದೇ ಅವರ ಕೆಲಸಕ್ಕೆ ಸೇರಿದ ಮೊದಲ ದಿನದ ಜವಾಬ್ದಾರಿ’ ಎನ್ನುತ್ತಾ ಕಥಾಹಂದರದ ಸುಳಿವನ್ನು ಚಿತ್ರತಂಡ ನೀಡಿದೆ. ಆಕರ್ಷಕ ಪೋಸ್ಟರ್ನಲ್ಲಿ, ಕಾಮಿಡಿ ಪಾತ್ರದಲ್ಲಿ ಡ್ಯಾನಿಶ್ ಸೇಠ್ ಕಾಣಿಸಿಕೊಂಡಿದ್ದಾರೆ. ವಿಡಂಬನೆಯ ಜೊತೆಗೆ ಹಾಸ್ಯಭರಿತವಾದ ಮಾತಿನ ಮೂಲಕ ಅವರು ಪ್ರೇಕ್ಷಕರ ಮನಸೆಳೆಯಲಿದ್ದಾರೆ ಎಂದಿದೆ ಚಿತ್ರತಂಡ.

ವಂಶಿಧರ್ ಭೋಗರಾಜು ನಿರ್ದೇಶಿಸಿರುವ ಈ ಸಿನಿಮಾವನ್ನು, ಪಿಆರ್ಕೆ ಬ್ಯಾನರ್ನಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಗುರುದತ್ತ ತಲ್ವಾರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಪ್ರಕಾಶ್ ಬೆಳವಾಡಿ, ಸಂಯುಕ್ತ ಹೊರನಾಡ್, ವಿನೀತ್ ಬೀಪ್ ಕುಮಾರ್ ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರದಲ್ಲಿದ್ದಾರೆ.

ಸಂಸ್ಕೃತ ಸತ್ತ ಭಾಷೆ, ಅದರ ಬದಲು ಅನ್ನ ನೀಡುವ ಕನ್ನಡ ಉಳಿಸಿ: ಮಹೇಶ್ ಚಂದ್ರ ಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.