‘ಮಿ. ಬ್ಯಾಚುಲರ್’ ಆಗಲಿದ್ದಾರೆ ಡಾರ್ಲಿಂಗ್ ಕೃಷ್ಣ

ಇದೇನಪ್ಪಾ! ‘ಲವ್ ಮಾಕ್ಟೇಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾಗೆ ಫೆಬ್ರುವರಿ 14ಕ್ಕೆ ಮದುವೆ ನಿಶ್ಚಯವಾಗಿದೆ. ಈಗ ಡಾರ್ಲಿಂಗ್ ಕೃಷ್ಣ ಮಿ. ಬ್ಯಾಚುಲರ್ ಆಗುತ್ತಿದ್ದಾರಾ ಅಂತ ಯೋಚಿಸ್ತಾ ಇದೀರಾ? ‘ಮಿ. ಬ್ಯಾಚುಲರ್’ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾ. ಈ ಚಿತ್ರಕ್ಕೆ ನಾಯ್ಡು ಬಂದರ್ ನಿರ್ದೇಶನವಿದೆ. ಚಿತ್ರದಲ್ಲಿ ನಿಮಿಕಾ ರತ್ನಾಕರ್ ಹಾಗೂ ಮಿಲನಾ ನಾಗರಾಜ್ ನಾಯಕಿಯರಾಗಿ ಆಯ್ಕೆ ಆಗಿದ್ದಾರೆ. ಆದರೆ ಇವರ ಪಾತ್ರಗಳ ಪರಿಚಯ ಇನ್ನಷ್ಟೇ ಆಗಬೇಕಿದೆ.
ಹೊಸವರ್ಷದ ಪ್ರಯ್ತಕ ಚಿತ್ರ ಶೀರ್ಷಿಕೆ ಬಿಡುಗಡೆ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಫಸ್ಟ್ಲುಕ್ ಮೂಲಕ ಅಭಿಮಾನಿಗಳ ಮುಂದೆ ಬರುವುದಾಗಿ ಹೇಳಿದೆ.
ಲಾಕ್ಡೌನ್ ಅವಧಿಯಲ್ಲಿ ಒಟಿಟಿಯಲ್ಲಿ ಬಿಡುಗಡೆಯಾದ ‘ಲವ್ ಮಾಕ್ಟೇಲ್’ ಚಿತ್ರ ಯುವ ಮನಸ್ಸಿಗೆ ಬಹಳ ಬೇಗ ಹತ್ತಿರವಾಗಿತ್ತು. ಥಿಯೇಟರ್ನಲ್ಲಿ ಬಿಡುಗಡೆಯಾದಾಗ ಗೆಲ್ಲಲು ಸಾಧ್ಯವಾಗದ ಈ ಸಿನಿಮಾ ಒಟಿಟಿಯಲ್ಲಿ ನಿರೀಕ್ಷಿಸದ ಮಟ್ಟಿಗೆ ಯಶಸ್ಸು ಕಂಡಿತ್ತು. ಜೊತೆಗೆ ಇದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಇಬ್ಬರಿಗೂ ಸಿನಿಮಾಗಳಲ್ಲಿ ಹೊಸ ಹೊಸ ಅವಕಾಶಗಳು ಬರಲು ಕಾರಣವಾಗಿತ್ತು.
ಮಿಲನಾ ಹಾಗೂ ಕೃಷ್ಣ ಇತ್ತೀಚೆಗೆ ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿ ಮಾಡಿದ್ದರು. ಬ್ಯಾಚುಲರ್ ಪಾರ್ಟಿಯ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿತ್ತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.