ಈ ಹಿಂದೆ ‘ಸಿದ್ಧಾರ್ಥ’ ಸಿನಿಮಾದಲ್ಲಿ ಪ್ರಕಾಶ್ ಅವರ ಜೊತೆ ಕೆಲಸ ಮಾಡಿದ್ದೆ. ದರ್ಶನ್ ಜೊತೆ ನಾಲ್ಕು ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ಕೂಲ್ ಆಗಿ ಕೆಲಸ ಮಾಡುವವರು. ಜೊತೆಯಲ್ಲಿರುವ ಕಲಾವಿದರ ಜೊತೆಯಲ್ಲಿ ಸನ್ನಿವೇಶ ಕಟ್ಟುವುದರ ಬಗ್ಗೆಯಷ್ಟೇ ಅವರ ಗಮನವಿರುತ್ತದೆ. ವೃತ್ತಿಪರತೆಯನ್ನು ಮೈಗೂಡಿಸಿಕೊಂಡಿರುವ ಮಹತ್ವದ ನಟ ದರ್ಶನ್.
ಅಚ್ಯುತ್ ಕುಮಾರ್, ನಟ
ಸಿನಿಮಾದಲ್ಲಿನ ನನ್ನ ಪಾತ್ರದ ಅವಧಿ ಕಡಿಮೆ ಇದ್ದರೂ, ಪರಿಣಾಮಕಾರಿಯಾಗಿದೆ. ದರ್ಶನ್ ಅವರ ಜೊತೆ ಎರಡನೇ ಸಿನಿಮಾ ಇದಾಗಿದೆ. ‘ನವಗ್ರಹ’ ತೆರೆಕಂಡು 18 ವರ್ಷ ಕಳೆದಿದೆ.