ಕ್ರೆಡ್ ಕಂಪನಿ ಜಾಹೀರಾತಿನಲ್ಲಿ ಉಗ್ರಕೋಪಿಯಾಗಿ ಕಾಣಿಸಿಕೊಂಡಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ನಟಿ ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಟಾಂಗ್ ನೀಡಿದ್ದಾರೆ.

ಇಂದಿರಾನಗರ್ ಕಾ ಗೂಂಡಾ ಹೂಂ ಮೈ ಎಂದು ರಾಹುಲ್ ದ್ರಾವಿಡ್ ಜಾಹೀರಾತಿನಲ್ಲಿ ಹೇಳಿದ್ದರೆ, ನಟಿ ದೀಪಿಕಾ ಅವರು ಇನ್‌ಸ್ಟಾಗ್ರಾಂನಲ್ಲಿ ನಾನು ಇಂದಿರಾನಗರದ ಗೂಂಡಿ (ರೌಡಿ) ಎಂದು ಬರೆದು ಕಾಲೆಳೆದಿದ್ದಾರೆ.

ಸನ್ನಿವೇಶಶ ಹೀಗಿದೆ: ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿರುವ ರಾಹುಲ್ ದ್ರಾವಿಡ್ ಸಿಕ್ಕಾಪಟ್ಟೆ ಸಿಡುಕುತ್ತಾರೆ. ಹೊಡೆದುಬಿಡುತ್ತೇನೆ ಎನ್ನುತ್ತಾರೆ. ಪಕ್ಕದ ಕಾರಿನ ಮೇಲೆ ಪಾನೀಯ ಎರಚುತ್ತಾರೆ. ಆ ಕಾರಿನ ಮಿರರನ್ನು ಬ್ಯಾಟಿನಿಂದ ಚಚ್ಚಿಹಾಕುತ್ತಾರೆ. ಕಾರಿನ ರೂಫ್‌ಟಾಪ್ ಗಾಜು ತೆರೆದು ನಿಂತುಕೊಂಡು, ‘ಇಂದಿರಾನಗರ ಕಾ ಗೂಂಡಾ ಹೂಂ ಮೇ’ ಎಂದು ಆಕ್ರೋಶಭರಿತರಾಗಿ ನುಡಿಯುತ್ತಾರೆ.

ಈ ದೃಶ್ಯಕ್ಕೆ ರಾಹುಲ್ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಹಾಗೆಯೇ ಹಲವರು ಕಾಲೆಳೆದಿದ್ದಾರೆ. ಬಾಲಿವುಡ್ ಹಾಗೂ ಕ್ರಿಕೆಟ್ ರಂಗದ ತಾರೆಯರು ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೀಗೆ ಚರ್ಚೆಗಳು ಮುಂದುವರಿದಿವೆ.

ಕ್ರೆಡ್ ಅನ್ನುವುದು ಕ್ರೆಡಿಟ್ ಕಾರ್ಡ್ ಬಿಲ್ ನಿರ್ವಹಣೆ ಮಾಡುವ ಅಪ್ಲಿಕೇಷನ್ ಆಗಿದೆ. ಯುಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇದರ ಜಾಹೀರಾತು ಟ್ರೆಂಡಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.