ಶನಿವಾರ, ಸೆಪ್ಟೆಂಬರ್ 18, 2021
28 °C

ಜೀವನ ಸಾಕು ಎಂದು ಅನ್ನಿಸಿತ್ತು: ದೀಪಿಕಾ ಪಡುಕೋಣೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Deepika Padukone iNSTAGRAM Post Screengrab

ಬೆಂಗಳೂರು: 'ನನಗೆ ಬದುಕುವ ಆಸೆಯೇ ಇಲ್ಲವಾಗಿತ್ತು, ಜೀವನದ ಮೇಲೆ ನಂಬಿಕೆ ಕಳೆದುಕೊಂಡಿದ್ದೆ' ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

ಟಿವಿ ಕ್ವಿಜ್ ಶೋ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 13ರಲ್ಲಿ ಭಾಗವಹಿಸಿದ್ದ ಅವರು, 2014ರಲ್ಲಿ ತಾನು ಖಿನ್ನತೆಗೆ ಒಳಗಾಗಿದ್ದೆ ಎನ್ನುವ ಸಂಗತಿಯನ್ನು ಹಂಚಿಕೊಂಡಿದ್ದಾರೆ.

'ನಾನು ಮತ್ತೆ ಚಿತ್ರರಂಗ ಪ್ರವೇಶಿಸಬಹುದು ಎಂದುಕೊಂಡಿರಲಿಲ್ಲ. ಜನರೊಡನೆ ಮತ್ತೆ ಮಾತನಾಡುವುದು ಅಸಾಧ್ಯ ಎನ್ನಿಸತೊಡಗಿತ್ತು. ಹೊರಗಡೆ ಹೋಗಲಾರದೇ, ಮನೆಯಲ್ಲೂ ಇರಲಾರದೆ ಮಾನಸಿಕವಾಗಿ ತೊಂದರೆ ಅನುಭವಿಸಿದ್ದೆ. ನನ್ನ ಜೀವನಕ್ಕೆ ಅರ್ಥವಿಲ್ಲ ಎಂಬ ಭಾವನೆ ಮೂಡಿತ್ತು' ಎಂದು ದೀಪಿಕಾ ಮನಸು ಬಿಚ್ಚಿ ಮಾತನಾಡಿದ್ದಾರೆ.

ಖಿನ್ನತೆ ಕುರಿತು ಈ ಹಿಂದೆಯೂ ದೀಪಿಕಾ ಮಾತನಾಡಿದ್ದರು.

ಜತೆಗೆ ಅಂತಹ ಪರಿಸ್ಥಿತಿ ಎದುರಾದಾಗ ಮನೆಯವರ ಸಹಕಾರ ಮತ್ತು ವೈದ್ಯರ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂಬ ಸಲಹೆ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು