ಪೂಜೆಯೊಂದಿಗೆ ಬೆಂಗಳೂರಿನಲ್ಲಿ ‘ದೀಪ್‌ವೀರ್’ ಮದುವೆ ಸಡಗರ ಶುರು

7

ಪೂಜೆಯೊಂದಿಗೆ ಬೆಂಗಳೂರಿನಲ್ಲಿ ‘ದೀಪ್‌ವೀರ್’ ಮದುವೆ ಸಡಗರ ಶುರು

Published:
Updated:

ಬೆಂಗಳೂರು: ಆರು ವರ್ಷಗಳಿಂದ ಪ್ರೇಮಲೋಕದಲ್ಲಿ ವಿಹರಿಸುತ್ತಿರುವ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಮದುವೆಗೆ ಸಿದ್ಧತೆ ಆರಂಭವಾಗಿದೆ. ಈ ಜೋಡಿಯನ್ನು ಅಭಿಮಾನಿಗಳು ‘ದೀಪ್‌ವೀರ್’ ಎಂದೇ ಗುರುತಿಸುತ್ತಾರೆ. ನಗರದಲ್ಲಿ ಶುಕ್ರವಾರ ವಧುವಿನ ಸ್ವಗೃಹದಲ್ಲಿ ಮದುವೆಗೆ ಪೂರ್ವಭಾವಿಯಾಗಿ ಪೂಜಾಕಾರ್ಯಗಳು ಆರಂಭವಾದವು ಎಂದು ‘ಬಾಲಿವುಡ್ ಶಾದಿ’ ಜಾಲತಾಣ ವರದಿ ಮಾಡಿದೆ. ತಾರಾಜೋಡಿಯ ಮದುವೆ ಇಟಲಿಯಲ್ಲಿ ನ.14 ಮತ್ತು 15ರಂದು ನಡೆಯಲಿದೆ.

ದೀಪಿಕಾ ಪೂಜೆ ಮಾಡುತ್ತಿರುವ ಚಿತ್ರವನ್ನು ಸ್ಟೈಲಿಸ್ಟ್ ಶಲೀನಾ ನತಾನಿ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ‘ನಿನ್ನನ್ನು ಚಂದ್ರನಷ್ಟು ಪ್ರೀತಿಸುತ್ತೇನೆ. ಜಗತ್ತಿನಲ್ಲಿರುವ ಖುಷಿಯೆಲ್ಲವೂ ನಿನಗೆ ಸಿಗಬೇಕು’ ಎಂದು ಶಲೀನಾ ಬರೆದುಕೊಂಡಿದ್ದಾರೆ. ತಲೆಗೂದಲು ಗಂಟು ಹಾಕಿಕೊಂಡಿರುವ ದೀಪಿಕಾ ಹೊಳೆವ ಕಿತ್ತಳೆ ಬಣ್ಣದ ಸಬ್ಯಸಾಚಿ ಸೂಟ್‌ನಲ್ಲಿ ಮಿಂಚುತ್ತಿದ್ದಾರೆ. ದೀಪಿಕಾ ಸುತ್ತಲು ಇರುವ ಗೆಳೆಯ–ಗೆಳತಿಯರು ಖುಷಿಯಿಂದ ನಗುತ್ತಿದ್ದಾರೆ. ಶಲೀನಾ ಪೋಸ್ಟ್ ಮಾಡಿರುವ ಮತ್ತೊಂದು ಚಿತ್ರದಲ್ಲಿ ದೀಪಿಕಾ  ಪೂಜೆ ಮಾಡುತ್ತಿದ್ದಾರೆ.

 
 
 
 

 
 
 
 
 
 
 
 
 

Love you to the mooon and back ❤️❤️❤️❤️ So so so so so sooooo happy for you . Cant wait for it all to starttttt ❤️❤️ You deserve all the happiness in the world and more . @deepikapadukone .

Shaleena Nathani (@shaleenanathani) ರಿಂದ ಹಂಚಲಾದ ಪೋಸ್ಟ್ ಅವರು ರಂದು

ದೀಪಿಕಾರ ಕೇಶ ವಿನ್ಯಾಸಕಿ ಗೇಬ್ರಿಯಲ್ ಜಾರ್ಜಿಯು ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ‘ಹೊಸ ಬಾಳಿನ ಆರಂಭಕ್ಕೆ ನಾಂದಿ ಹಾಡುವ ಪೂಜೆಯಲ್ಲಿ ಪಾಲ್ಗೊಂಡಿರುವುದು ಖುಷಿಕೊಟ್ಟಿದೆ’ ಎಂದು ಹೇಳಿಕೊಂಡಿದ್ದಾರೆ. ನೆಚ್ಚಿನ ನಟಿಯ ಚಿತ್ರಗಳನ್ನು ಪ್ರಕಟಿಸಿರುವುದಕ್ಕೆ ದೀಪಿಕಾರ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ. ದೀಪಿಕಾ ಮತ್ತು ರಣ್‍ವೀರ್ ಅ.21ರಂದು ತಾವಿಬ್ಬರೂ ಮದುವೆಯಾಗುವುದಾಗಿ ಪ್ರಕಟಿಸಿದ್ದರು.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೋಂಕಿ ರಾಸ್‌ಲೀಲಾ– ರಾಮ್‌ ಲೀಲಾ’ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದಾದ ನಂತರ ಬಾಜಿರಾವ್ ಮಸ್ತಾನಿ, ಪದ್ಮಾವತ್ ಮತ್ತು ಫೈಂಡಿಂಗ್ ಫ್ಯಾನಿಗಾಗಿ ಇಬ್ಬರೂ ಜತೆಯಾಗಿ ನಟಿಸಿದ್ದರು.

 

 
 
 
 
 
 
 
 
 

To new beginnings ❤️❤️ @deepikapadukone

Shaleena Nathani (@shaleenanathani) ರಿಂದ ಹಂಚಲಾದ ಪೋಸ್ಟ್ ಅವರು ರಂದು

‘ಮಿಡ್‌ ಡೇ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ದೀಪಿಕಾ– ರಣ್‍ವೀರ್ ಮದುವೆಗಾಗಿ ಎರಡು ಪ್ರತ್ಯೇಕ ಸಮಾರಂಭಗಳು ನಡೆಯಲಿವೆ. ನ.14ರಂದು ಕನ್ನಡಿಗರ ಶೈಲಿಯಲ್ಲಿ ಮತ್ತು ನ.15ರಂದು ಸಿಖ್ ಶೈಲಿಯಲ್ಲಿ (ಆನಂದ್‌ ಕರಾಜ್) ವಿವಾಹ ವಿಧಿವಿಧಾನಗಳು ನೆರವೇರಲಿವೆ. ಇಟಲಿಯಲ್ಲಿ ಮದುವೆಯ ನಂತರ ಬೆಂಗಳೂರಿನಲ್ಲಿ ಕುಟುಂಬದ ಸದಸ್ಯರಿಗಾಗಿ ಮತ್ತು ಮುಂಬೈನಲ್ಲಿ ಸಿನಿಮಾ ಉದ್ಯಮದ ಗೆಳೆಯರು, ಸಹೋದ್ಯೋಗಿಗಳಿಗಾಗಿ ಅದ್ದೂರಿ ಆರತಕ್ಷತೆ ಸಮಾರಂಭಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !