ಸಮ ಸಂಭಾವನೆ ಕೊಡದಿದ್ದರೆ ದೀಪಿಕಾ ಕಾಲ್‌ಶೀಟ್ ಇಲ್ಲ!

7

ಸಮ ಸಂಭಾವನೆ ಕೊಡದಿದ್ದರೆ ದೀಪಿಕಾ ಕಾಲ್‌ಶೀಟ್ ಇಲ್ಲ!

Published:
Updated:
Prajavani

‘ನಾವೂ ಹೀರೊಗಳಂತೆ ಶ್ರಮಪಟ್ಟು ದುಡೀತೇವೆ. ಆದರೆ ಸಂಭಾವನೆಯ ವಿಚಾರ ಬಂದಾಗ ನಾಯಕನಟಿಯರಿಗೆ ತಾರತಮ್ಯ ಯಾಕೆ ಮಾಡುತ್ತೀರಿ? ನಮಗೂ ಹೀರೊಗಳಂತೆ ಸಮ ಸಂಭಾವನೆ ಕೊಡಿ’. ಬಾಲಿವುಡ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ ದೀ‍ಪಿಕಾ ಪಡುಕೋಣೆ ಅವರ ಸಿಡಿನುಡಿಗಳಿವು.

‘ಸಿನಿಮಾಗಳಲ್ಲಿ ನಮಗೆ ಅವಕಾಶಗಳ ಕೊರತೆಯೇನೂ ಇಲ್ಲ. ಸಿನಿಮಾದ ಬಗೆ ಮತ್ತು ಆ ಸಿನಿಮಾಗಳಲ್ಲಿ ನಟಿಯರಿಗೆ ಸಂಭಾವನೆಯ ವಿಚಾರದಲ್ಲಿ ಮಾತ್ರ ಸಾಕಷ್ಟು ಬದಲಾವಣೆಗಳಾಗಿವೆ. ನಾನು ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುತ್ತೇನೆ. ನನ್ನೊಂದಿಗೆ ಕೆಲಸ ಮಾಡುವ ಹೀರೊಗಳಿಗೆ ಕೊಡುವಷ್ಟೇ ಸಂಭಾವನೆ ಕೊಡದಿದ್ದರೆ ಕಾಲ್‌ಶೀಟ್‌ ಕೊಡುವುದಿಲ್ಲ. ಈ ಹೋರಾಟದಲ್ಲಿ ನಾನಂತೂ ಯಶಸ್ವಿಯಾಗಿದ್ಧೇನೆ’ ಎಂದು ದೀಪಿಕಾ ಹೇಳಿದ್ದಾರೆ. 

ದೀಪಿಕಾ ಸೇರಿದಂತೆ 51 ಮಂದಿ ಮಹಿಳಾ ಸಾಧಕಿಯರನ್ನು ಕುರಿತ ಪುಸ್ತಕ ‘ದಿ ಟಾಟ್‌ ದಟ್‌ ವೆಂಟ್‌ ಫಾರ್‌ ಎ ವಾಲ್‌’ ಬಿಡುಗಡೆ ಮಾಡಿ ಮಾತನಾಡಿದ ದೀಪಿಕಾ ತಮ್ಮ ವೃತ್ತಿಕ್ಷೇತ್ರದ ಬಗೆಗಿನ ಈ ಅಸಮಾಧಾನವನ್ನು ಪ್ರಸ್ತಾಪಿಸಿದರು. ಈ ಹಿಂದೆಯೂ ಸಮ ಸಂಭಾವನೆ ಕುರಿತು ಈ ನಟಿ ದನಿ ಎತ್ತಿದ್ದರು. ಅಲ್ಲದೆ, ನಾಯಕನಟರಿಗೆ ಕೊಡುವಷ್ಟೇ ಸಂಭಾವನೆ ಪಡೆದು ಸಡ್ಡುಹೊಡೆದ ದಿಟ್ಟ ನಟಿ.

ನಾಯಕ ಮತ್ತು ನಾಯಕಿಯ ಸಂಭಾವನೆಯಲ್ಲಿನ ಅಸಮಾನತೆಯ ಕಾರಣಕ್ಕೆ ಇತ್ತೀಚೆಗಷ್ಟೇ ಒಂದು ಸಿನಿಮಾದ ಆಫರ್‌ ಕೈಬಿಟ್ಟ ವಿಚಾರವನ್ನೂ ದೀಪಿಕಾ ಪ್ರಸ್ತಾಪಿಸಿದರು. ‘ಆ ಸಿನಿಮಾ ಕ್ರಿಯಾತ್ಮಕತೆ ಮತ್ತು ಇತರ ತಾಂತ್ರಿಕ ಕಾರಣಗಳಿಗೆ ಇಷ್ಟವಾಗಿತ್ತು. ಆದರೆ ಸಂಭಾವನೆಯಲ್ಲಿನ ತಾರತಮ್ಯ ನನ್ನ ಗಮನಕ್ಕೆ ಬಂತು. ನಾಯಕನಷ್ಟೇ ನನಗೂ ಕೊಡಲು ಆ ನಿರ್ದೇಶಕ ಮೀನ–ಮೇಷ ಎಣಿಸಿದ. ಕೆಲದಿನಗಳ ನಂತರ ಮತ್ತೆ ಭೇಟಿಯಾದ ಆತ ಸಮ ಸಂಭಾವನೆ ಕೊಡಲಾಗದು ಎಂದರು. ನಾನು ಟಾಟಾ ಬೈ ಬೈ ಎಂದು ಕಳುಹಿಸಿದೆ’ ಎಂದು ವಿವರಿಸಿದರು.

‘ನಾಯಕ ನಟರಷ್ಟೇ ಕ್ರಿಯಾಶೀಲವಾಗಿ ದುಡಿಯುವ ನಾಯಕನಟಿಯರಿಗೆ ಸಂಭಾವನೆಯ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆಂದರೆ ಆಕೆ ಸುಖವಾಗಿ ನಿದ್ರಿಸಲಾರಳು. ನಾನು ಇಂತಹ ನಿರ್ಧಾರ ತೆಗೆದುಕೊಳ್ಳುವ ಕಾರಣ ತೃಪ್ತಿಯಿಂದ ನಿದ್ದೆ ಮಾಡುತ್ತೇನೆ’ ಎಂದು ನಕ್ಕರು ದೀಪಿಕಾ.

ಬರಹ ಇಷ್ಟವಾಯಿತೆ?

 • 28

  Happy
 • 2

  Amused
 • 2

  Sad
 • 1

  Frustrated
 • 4

  Angry

Comments:

0 comments

Write the first review for this !