ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಗರ್ಲ್‌ ಸನ್ನಿ ಲಿಯೋನ್

Last Updated 31 ಜುಲೈ 2019, 19:30 IST
ಅಕ್ಷರ ಗಾತ್ರ

ತಮ್ಮ ಮುಂದಿನ ಚಿತ್ರ ‘ಕೋಕಾ ಕೋಲಾ’ದಲ್ಲಿ ನಟಿ ಸನ್ನಿ ಲಿಯೋನ್‌ ಡಿ– ಗ್ಲಾಮ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್‌ನಲ್ಲಿ ಇದು ಅವರ ನಾಲ್ಕನೇ ಸಿನಿಮಾ. ಮಾದಕತೆಯಿಂದಲೇ ಗುರುತಿಸಿಕೊಂಡಿರುವ ಸನ್ನಿ, ಈ ಚಿತ್ರದಲ್ಲಿ ‘ದೇಸಿ ಗರ್ಲ್‌’! ಇದೀಗ ಅವರ ಈ ಅವತಾರದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಪ್ರಸಾದ್‌ ತತಿಕೇನಿ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿ ಸೀರೆಯಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ‘ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳಲ್ಲಿ ಆಧುನಿಕ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದೇನೆ. ಈಗ ಈ ಚಿತ್ರದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ಸೀರೆ ಎಂದರೆ ಇಷ್ಟ. ಅದನ್ನು ಉಟ್ಟು ಕನ್ನಡಿ ಮುಂದೆ ನಿಂತಾಗ ನನಗೆ ನಾನೇ ತುಂಬ ವಿಭಿನ್ನವಾಗಿ ಕಾಣುತ್ತೇನೆ. ಈ ಚಿತ್ರಕ್ಕಾಗಿದೇಶದ ಬೇರೆ ಬೇರೆ ಭಾಗದ ಸೀರೆಗಳನ್ನು ನನ್ನ ಸ್ಟೈಲಿಷ್ಟ್‌ ಹಿತೇಂದ್ರ ಸಂಗ್ರಹಿಸಿ ತಂದಿದ್ದಾರೆ’ ಎಂದು ಸನ್ನಿ ಹೇಳಿದ್ದಾರೆ.

ಈ ಸಿನಿಮಾಕ್ಕಾಗಿ ಸನ್ನಿ ಭೋಜಪುರಿ ಭಾಷೆ ಕಲಿತಿದ್ದಾರೆ. ‘ಈ ಚಿತ್ರದಲ್ಲಿ ಪ್ರೇಕ್ಷಕರು ನನ್ನನ್ನು ಹೊಸ ಅವತಾರದಲ್ಲಿ ನೋಡಲಿದ್ದಾರೆ’ ಎಂದು ಅವರು ಹೇಳಿಕೊಂಡಿದ್ದಾರೆ.ಜೂನ್‌ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT