ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಿಲ್ಲ: ನಟ ಡಾಲಿ ಧನಂಜಯ ಸ್ಪಷ್ಟನೆ

ಬೆಂಗಳೂರು: ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ ಮತ್ತು ಯೋಗಿ ಅಭಿನಯಿಸಿರುವ ಹೆಡ್‌ಬುಷ್ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಚಿತ್ರದಲ್ಲಿ ವೀರಗಾಸೆ ಕಲಾವಿದನಿಗೆ ಒದೆಯಲಾಗಿದೆ. ಇದು ವೀರಭದ್ರನಿಗೆ ಮಾಡಿದ ಅಪಮಾನ ಎಂದು ಆರೋಪಿಸಲಾಗುತ್ತಿದೆ. ಈ ಕುರಿತ ಒಂದು ವಿಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಆದರೆ, ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ನಟ ಡಾಲಿ ಧನಂಜಯ, ಚಿತ್ರದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅಪಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ವೀರಗಾಸೆ ಕಲಾವಿದರ ವೇಷ ತೊಟ್ಟಿದ್ದ ಕಲಾವಿದರು ಹಿಂದೆ ಸರಿದ ಮೇಲೆ ಅಲ್ಲಿದ್ದವರ ಮೇಲೆ ಅಟ್ಯಾಕ್ ನಡೆದಿರುವ ದೃಶ್ಯ ಚಿತ್ರದಲ್ಲಿದೆ. ಚಿತ್ರವನ್ನು ನೋಡದವರು ಈ ಬಗ್ಗೆ ಆಕ್ಷೇಪ ಎತ್ತುತ್ತಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಯಾರಿಗೂ ಅಪಮಾನ ಮಾಡಿಲ್ಲ. ಹಾಗೇನಾದರೂ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಇದೇವೇಳೆ, ವೀರಗಾಸೆ ಕಲಾವಿದರ ಬಗ್ಗೆ ಮಾತನಾಡುವವರು ಅವರ ಜೀವನದ ಬಗ್ಗೆ ಯೋಚಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಸರ್ಕಾರಿ ಅವರಿಗೆ ಮಾಸಾಶನ ನೀಡಬೇಕೆಂದು ಧನಂಜಯ ಒತ್ತಾಯಿಸಿದ್ದಾರೆ.
ಡಾನ್ ಜಯರಾಜ್ ಜೀವನಕಥೆ ಆಧಾರಿತ ಚಿತ್ರ ಇದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.