ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಿಂದ ಮನೆಗೆ ಮರಳಿದ ಧರ್ಮೇಂದ್ರ: ಮಿತಿ ಮೀರಿ ಕೆಲಸ ಮಾಡಬೇಡಿ ಎಂದ ನಟ

Last Updated 3 ಮೇ 2022, 8:43 IST
ಅಕ್ಷರ ಗಾತ್ರ

ಮುಂಬೈ:ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

84 ವರ್ಷದ ಧರ್ಮೇಂದ್ರ ಅವರಿಗೆತೀವ್ರ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ (ಮೇ 1) ಇಲ್ಲಿನ ʼಬ್ರೀಚ್ ಕ್ಯಾಂಡಿʼ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಧರ್ಮೇಂದ್ರ ಸೋಮವಾರ ರಾತ್ರಿ ಮನೆಗೆ ಮರಳಿದ್ದಾರೆ. ಬಳಿಕ ಅಭಿಮಾನಿಗಳಿಗೆ ವಿಡಿಯೊ ಸಂದೇಶವನ್ನು ರವಾನಿಸಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಧರ್ಮೇದ್ರ, ‘ಸ್ನೇಹಿತರೇ ಯಾವುದನ್ನೂ ಅತಿಯಾಗಿ ಮಾಡಬೇಡಿ. ಇದೇ ಕಾರಣಕ್ಕೆ ಬೆನ್ನಿನ ಭಾಗದಲ್ಲಿ ನೋವು ಅನುಭವಿಸಿದ್ದೇನೆ. ಈಗಾಗಿ ಆಸ್ಪತ್ರೆ ಸೇರಬೇಕಾಯ್ತು. ಈ ಘಟನೆಯಿಂದ ಬುದ್ಧಿ ಕಲಿತಿದ್ದೇನೆ. ನಾನು ಆರೋಗ್ಯವಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ನೀವು ಕೂಡ ನಿಮ್ಮ ಮಿತಿಯನ್ನು ಮೀರಿ ಯಾವುದೇ ಕೆಲಸ ಮಾಡಬೇಡಿ‘ ಎಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಧರ್ಮೇಂದ್ರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT