ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೀರ ಸಾಮ್ರಾಟ ಸಿನಿಮಾದ ಟ್ರೇಲರ್ ಬಿಡುಗಡೆ: ರಾಕೇಶ್‌ಗೆ ಜೋಡಿಯಾದ ಅದ್ವಿತಿ ಶೆಟ್ಟಿ

Published 7 ಫೆಬ್ರುವರಿ 2024, 1:11 IST
Last Updated 7 ಫೆಬ್ರುವರಿ 2024, 2:50 IST
ಅಕ್ಷರ ಗಾತ್ರ

ರಾಕೇಶ್‌ ಹಾಗೂ ಅದ್ವಿತಿ ಶೆಟ್ಟಿ ನಟಿಸಿರುವ ‘ಧೀರ ಸಾಮ್ರಾಟ್‌’ ಸಿನಿಮಾ ಫೆಬ್ರುವರಿ 16ರಂದು ಬಿಡುಗಡೆಯಾಗುತ್ತಿದೆ. ಚಂದನವನದ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಸಿನಿಮಾದ ಟ್ರೈಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು. 

ಹೊಸಬರೇ ಸೇರಿಕೊಂಡು ಸಿದ್ಧಪಡಿಸಿರುವ ಈ ಚಿತ್ರವನ್ನು ತನ್ವಿ ಪ್ರೊಡಕ್ಷನ್ ಹೌಸ್ ಮೂಲಕ ಗುರುಬಂಡಿ ಅವರು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಕಿರುತೆರೆಯ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವವಿರುವ ಪವನ್‌ ಕುಮಾರ್‌ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪಾತ್ರವೊಂದಕ್ಕೂ ಬಣ್ಣಹಚ್ಚಿದ್ದಾರೆ.

ಸಸ್ಪೆನ್ಸ್‌ ಥ್ರಿಲ್ಲರ್ ಕಥಾಹಂದರದ ಈ ಸಿನಿಮಾದಲ್ಲಿ ಐದು ಧೀರ ಹುಡುಗರ ಗೆಳತನ ಹೇಗಿರುತ್ತದೆ ಎಂಬುದನ್ನು ಹೇಳಲಾಗಿದೆ ಎಂದಿದೆ ಚಿತ್ರತಂಡ. ತಾರಾಗಣದಲ್ಲಿ ಶಂಕರಭಟ್, ಶೋಭರಾಜ್, ಬಲ ರಾಜವಾಡಿ, ರಮೇಶ್‌ ಭಟ್‌, ಮನ್‌ಮೋಹನ್‌ ರೈ, ರವಿರಾಜ್, ಜ್ಯೋತಿ ಮರೂರು, ಮಂಡ್ಯ ಚಂದ್ರು ಮುಂತಾದವರು ನಟಿಸಿದ್ದಾರೆ. ರಾಘವ್‌ ಶುಭಾಷ್‌ ಸಂಗೀತ, ವೀರೇಶ್‌ ಎನ್.ಟಿ.ಎ. ಹಾಗೂ ಅರುಣ್‌ ರಮೇಶ್‌ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT