ಮಂಗಳವಾರ, ಜನವರಿ 19, 2021
27 °C

‘ದುಬಾರಿ’ಯಲ್ಲಿ ಒಂದಾಗಲಿದ್ದಾರೆ ಧ್ರುವ–ಶ್ರೀಲೀಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಧ್ರುವ ಸರ್ಜಾ ಅವರ 5ನೇ ಸಿನಿಮಾ ‘ದುಬಾರಿ’. ನಂದಕಿಶೋರ್ ನಿರ್ದೇಶನದ ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ದೇವಾಲಯವೊಂದರಲ್ಲಿ ನಡೆದಿತ್ತು. ಇದು ಧ್ರುವ ಹಾಗೂ ನಂದಕಿಶೋರ್ ಜೊತೆಯಾಗಿ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ. ಈ ಸಿನಿಮಾಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಧ್ರುವ ಅಭಿಮಾನಿಗಳಲ್ಲಿತ್ತು. ಈಗ ಆ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ ನಿರ್ದೇಶಕ ನಂದಕಿಶೋರ್‌. ಕಿಸ್‌ ಹಾಗೂ ಭರಾಟೆ ಖ್ಯಾತಿಯ ನಟಿ ಶ್ರೀಲೀಲಾ ಧ್ರುವ ಜೊತೆ ದುಬಾರಿಯಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದೆ.

‘ನಾನು ಇಲ್ಲಿಯವರೆಗೆ ಧ್ರುವಗೆ ಜೋಡಿಯಾಗದ ಹೊಸ ನಟಿಯನ್ನು ಹುಡುಕುತ್ತಿದ್ದೆ. ಶ್ರೀಲೀಲಾ ನಮ್ಮ ಮೊದಲ ಆಧ್ಯತೆಯಾಗಿದ್ದರು. ಯಾಕೆಂದರೆ ಅವರು ತಮ್ಮ ಸಿನಿಮಾಗಳಲ್ಲಿ ನಟನೆಯಿಂದ ಅಭಿಮಾನಿಗಳನ್ನು ಮೋಡಿ ಮಾಡಿದ್ದರು. ಧ್ರುವ ಹಾಗೂ ಶ್ರೀಲೀಲಾ ಒಳ್ಳೆಯ ಜೋಡಿಯಾಗುತ್ತಾರೆ. ಅಲ್ಲದೇ ನಮಗೆ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಬೇಕು ಎಂಬುದಿತ್ತು. ಆಕೆ ನಿಜಕ್ಕೂ ತಮ್ಮ ಸಿನಿಮಾಕ್ಕೆ ಹೇಳಿ ಮಾಡಿಸಿದ ಹಾಗಿದೆ. ಚಿತ್ರದ ಶೂಟಿಂಗ್ ಅನ್ನು ಜನವರಿ 2021ರಿಂದ ಆರಂಭ ಮಾಡುವ ಯೋಚನೆಯಲ್ಲಿದ್ದೇವೆ’ ಎಂದು ಟೈಮ್ ಆಫ್ ಇಂಡಿಯಾಗೆ ಹೇಳಿದ್ದಾರೆ ನಿರ್ದೇಶಕ ನಂದ ಕಿಶೋರ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು