ಮಂಗಳವಾರ, ಡಿಸೆಂಬರ್ 7, 2021
22 °C

6 ತಿಂಗಳ ಪುತ್ರನ ವಿಡಿಯೊ ಹಂಚಿಕೊಂಡ ದಿಯಾ: ‘Can I eat him up?’ ಎಂದ ಲಾರಾ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟಿ ದಿಯಾ ಮಿರ್ಜಾ ಅವರು ತಮ್ಮ ಆರು ತಿಂಗಳ ಮಗುವಿನ ವಿಡಿಯೊ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಅವ್ಯಾನ್‌ ಆಜಾದ್‌ ರೇಖಿಯ(ದಿಯಾರ ಮಗುವಿನ ಹೆಸರು) ಸಣ್ಣ ಕಾಲ್ಬೆರಳುಗಳನ್ನು ಚಿತ್ರೀಕರಿಸಿರುವ ದಿಯಾ ಮಿರ್ಜಾ ಅದಕ್ಕೆ ಹಿನ್ನೆಲೆ ಸಂಗೀತವನ್ನೂ ಅಳವಡಿಸಿದ್ದಾರೆ.

ದಿಯಾ ಮಿರ್ಜಾ ಅವರು ಈ ವಿಡಿಯೊವನ್ನು ಪೋಸ್ಟ್‌ ಮಾಡಿದ್ದು, ಹಲವು ಬಾಲಿವುಡ್‌ ನಟಿಯರ ಪ್ರೀತಿಗೆ ಪಾತ್ರವಾಗಿದೆ.

ಈ ವಿಡಿಯೊಗೆ ಬಾಲಿವುಡ್ ಸೆಲೆಬ್ರಿಟಿಗಳಾದ ತಾಹಿರಾ ಕಶ್ಯಪ್, ಮಲೈಕಾ ಅರೋರಾ, ಸಂಧ್ಯಾ ಮೃದುಲ್ ಮತ್ತು ಡಯಾನಾ ಪೆಂಟಿ ಹೃದಯದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ದಿಯಾರ ಸ್ನೇಹಿತೆ ಲಾರಾ ದತ್ತಾ ಕೂಡ ವಿಡಿಯೊಗೆ ಪ್ರತಿಕ್ರಿಯಿಸಿದ್ದು, 'ದಯವಿಟ್ಟು ನಾನು ಅವನನ್ನು ತಿನ್ನಬಹುದೇ?' ಎಂದು ಕೇಳಿದ್ದಾರೆ.

ಬಾಲಿವುಡ್‌ ನಟಿ ದಿಯಾ ಮಿರ್ಜಾ ಅವರು ಉದ್ಯಮಿ ವೈಭವ್‌ ರೇಖಿ ಅವರೊಂದಿಗೆ ಫೆಬ್ರವರಿ 15ರಂದು ವಿವಾಹವಾಗಿದ್ದಾರೆ.

ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ. ದಿಯಾ ಮತ್ತು ಚಿತ್ರ ನಿರ್ಮಾಪಕ ಸಾಹಿಲ್‌ ಸಂಘಾ ಅವರ ದಾಂಪತ್ಯ 11 ವರ್ಷಗಳ ಬಳಿಕ 2019ರಲ್ಲಿ ಅಂತ್ಯವಾಗಿತ್ತು.

ವೈಭವ್‌ ರೇಖಿ–ಸುನೈನಾ ರೇಖಿ ದಂಪತಿ ಸಹ ಇದೀಗ ಬೇರೆಯಾಗಿದ್ದು, ಒಬ್ಬಳು ಮಗಳಿದ್ದಾಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು