ಶನಿವಾರ, ಡಿಸೆಂಬರ್ 4, 2021
24 °C

ನಾಗಾರ್ಜುನಗೆ ಕಿಸ್ ಕೊಡೋಕೆ ಹೆಚ್ಚು ಮೊತ್ತಕ್ಕೆ ಬೇಡಿಕೆ ಇಟ್ಟರಾ ಅಮಲಾ ಪೌಲ್‌?

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಕಿಸ್‌ ಕೊಡುವುದಕ್ಕೆ ನಟಿ ಅಮಲಾ ಪೌಲ್‌ ಹೆಚ್ಚು ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳು ಟಾಲಿವುಡ್‌ ಅಂಗಳದಲ್ಲಿ ಕೇಳಿಬಂದಿವೆ.

ನಾರ್ಗಾಜುನ ಅಭಿನಯದ ‘ಗೋಸ್ಟ್​’​ ಸಿನಿಮಾದಿಂದ ನಟಿ ಕಾಜಲ್​ ಅಗರ್​ವಾಲ್​ ಹಿಂದೆ ಸರಿದಿದ್ದಾರೆ. ಆದ್ದರಿಂದ ಅಮಲಾ ಪೌಲ್​ ಅವರಿಗೆ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ಚಿತ್ರದಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಳ್ಳಲು ಅವರು ಹೆಚ್ಚು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ನಟಿ ಕಾಜಲ್​ ಅಗರ್​ವಾಲ್​ ಗರ್ಭಿಣಿ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಹಲವು ಸಿನಿಮಾಗಳಿಂದ ಹೊರಗುಳಿದ್ದಾರೆ. ಆ ಹಿನ್ನೆಲೆಯಲ್ಲಿ ‘ಗೋಸ್ಟ್​’ ಸಿನಿಮಾಗೆ ಹೊಸ ನಟಿಯ ಆಯ್ಕೆ ಅನಿವಾರ್ಯವಾಗಿತ್ತು. ಹಾಗಾಗಿ ನಿರ್ದೇಶಕ ಪ್ರವೀಣ್​ ಅವರು ಅಮಲಾಗೆ ಆಫರ್​ ನೀಡಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಎರಡು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇವನ್ನೂ ಓದಿ...

ಚಿರಂಜೀವಿ ಸರ್ಜಾ ಮಗ ರಾಯನ್‌ಗೆ ಮೊದಲ ಹುಟ್ಟುಹಬ್ಬ: ಮೇಘನಾ ಮನೆಯಲ್ಲಿ ಸಡಗರ

ಅನಸೂಯ ಬಟ್ಟೆ ಬಗ್ಗೆ ಶ್ರೀನಿವಾಸ ರಾವ್ ಟೀಕೆ: ನಟಿ ಬೆಂಬಲಕ್ಕೆ ನಿಂತ ಗೌರಿ ನಾಯ್ಡು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು