‘ಪಪ್ಪೆಟ್ ಶೋ ನಡೆಸುವ ಯುವತಿ ಹಾಗೂ ಆಕೆಯ ಪ್ರೀತಿಯ ಗೊಂಬೆಯಾದ ಡಿಂಕು ಸುತ್ತ ನಡೆಯುವ ಇಂಟರೆಸ್ಟಿಂಗ್ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದ ಎಡಿಟಿಂಗ್ ಕಾರ್ಯ ಮುಗಿದು ಡಬ್ಬಿಂಗ್ ಕೊನೆಯ ಹಂತದಲ್ಲಿದೆ. ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆಗೆ ತರುವ ಯೋಚನೆಯಿದೆ’ ಎಂದರು ನಿರ್ದೇಶಕರು.