ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಯ ಸೆರಗೆಲ್ಲಿ ದಿಶಾ?

Last Updated 30 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬಾಲಿವುಡ್‌ನ ಸಪೂರ ಸೊಂಟದ ಬೆಡಗಿ ದಿಶಾ ಪಟಾನಿ ಈಗ ಟ್ರೋಲ್‌ಗಳ ಸರಕಾಗಿದ್ದಾರೆ. ಸಲ್ಮಾನ್‌ ಖಾನ್‌– ಕತ್ರಿನಾ ಕೈಫ್‌ ಜೋಡಿಯ ಅದ್ದೂರಿ ಚಿತ್ರ ‘ಭಾರತ್‌‘ನಲ್ಲಿ ದಿಶಾ ಸೀರೆ ಉಟ್ಟಿರುವ ಶೈಲಿಯಿಂದಾಗಿ ಅವರು ಟ್ರೋಲ್‌ ಆಗುತ್ತಿದ್ದಾರೆ. ‘ದಿಶಾ, ನೀನು ಸೀರೆ ಉಟ್ಟಿದ್ದೆಯಾ?‘, ‘ದಿಶಾ ನಿನ್ನ ಮೈಯಲ್ಲಿ ಸೀರೆ ಎಲ್ಲಿದೆ?‘ ಎಂದೆಲ್ಲಾ ನೆಟಿಜನರು ದಿಶಾ ಕಾಲೆಳೆಯುತ್ತಿದ್ದಾರೆ.

ಭಾರತ್‌ ಸಿನಿಮಾದ ‘ಸ್ಲೋ ಮೋಷನ್‌’ ಎಂಬ ಹಾಡಿಗಾಗಿ ಸಲ್ಲೂ ಭಾಯ್ ಜತೆ ದಿಶಾ ಮೈಮರೆತು ನೃತ್ಯ ಮಾಡಿದ್ದರು. ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಪಡೆಯುತ್ತಿದ್ದಂತೆ ನೆಟಿಜನರು ನೆಟ್ಟಗೆ ದಿಶಾಳತ್ತ ಟೀಕೆಯ ಸುರಿಮಳೆಯನ್ನೇ ಮಾಡಿದ್ದಾರೆ. ಸಾಕಷ್ಟು ಸಂಖ್ಯೆಯ ಮೀಮ್‌ಗಳಲ್ಲೂ ದಿಶಾ ನೃತ್ಯದ ವಿಡಿಯೊ ಆಹಾರವಾಗಿದೆ. ಈ ವಿಡಿಯೊವನ್ನು ಯೂ ಟ್ಯೂಬ್‌ನಲ್ಲಿ ಒಂದೇ ದಿನದಲ್ಲಿ 25 ಲಕ್ಷಕ್ಕೂ ಅಧಿಕ ವೀಕ್ಷಣೆ ಮಾಡಲಾಗಿದೆ.

ವಿಶಾಲ್‌ ಮತ್ತು ಶೇಖರ್‌ ಜೋಡಿಯ ‘ಸ್ಲೋ ಮೋಷನ್‌‘ ಹಾಡಿಗಾಗಿ ದಿಶಾ ಹಳದಿ ಬಣ್ಣದ ಸಿಂಥೆಟಿಕ್‌ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಯ ಸೆರಗನ್ನು ಸೊಂಟದಿಂದಲೇ ತಿರುಚಿ ತಿರುಚಿ ಹಗ್ಗದಂತೆ ಮಾಡಲಾಗಿದೆ. ಸೊಂಟಕ್ಕೂ ಅಂತಹುದೇ ‘ಸೀರೆಯ ಹಗ್ಗ‘ವನ್ನು ಬಿಗಿಯಲಾಗಿದೆ. ತೋಳಿಲ್ಲದ ರವಿಕೆ ಮತ್ತು ಸಪಾಟು ಹೊಟ್ಟೆಯಲ್ಲಿ ಬಿಂದಾಸ್‌ ಆಗಿ ಕುಣಿದು ನೃತ್ಯ ಮಾಡಿದ್ದಾರೆ ದಿಶಾ. ಸೀರೆ ಉಟ್ಟಿರುವ ರೀತಿ ನೆಟಿಜನರ ತಲೆಕೆಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬಗ್ಗೆ ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ಸುಮ್ಮನಿದ್ದ ದಿಶಾ ಕೊನೆಗೊಂದು ಪ್ರಶ್ನೆ ಎಸೆದಿದ್ದಾರೆ– ‘ನಾನು ನಿಮಗೆ ಹಾಸ್ಯವಾಗಿ ಕಾಣುತ್ತಿದ್ದೇನಾ?’ ಎಂದು. ಅದಕ್ಕೂ ನೆಟಿಜನರು ತಿರುಗೇಟು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸೀರೆಯ ಸೆರಗಿನಿಂದ ಮಾಡಿದ ಹಗ್ಗ ದಿಶಾ ಕತ್ತಿಗೇ ಸುತ್ತಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT