ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಹಾಟ್ ಫೋಟೊ: ಇನ್‌ಸ್ಟಾಗ್ರಾಮ್‌ನಲ್ಲಿ ದಿಶಾ ಪಟಾನಿ ಗ್ಲಾಮರ್ ರಂಗು  

Last Updated 25 ಮಾರ್ಚ್ 2021, 9:16 IST
ಅಕ್ಷರ ಗಾತ್ರ

ಮುಂಬೈ: ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಹಾಟ್ ಫೋಟೊಗಳನ್ನು ಹಾಕುತ್ತಾ ಯುವಕರ ಎದೆಗೆ ಕಿಚ್ಚು ಹಚ್ಚುವ ದಿಶಾ ಪಟಾನಿ, ಈಗ ಮತ್ತೊಂದು ಬೀಚ್ ಉಡುಗೆಯಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ.

ಬುಧವಾರ ಸಂಜೆ, ನಟಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಬಿಕಿನಿ ಫೋಟೊವೊಂದನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿನಿಮಾಗಳ ಶೂಟಿಂಗ್ ಅಥವಾ ಜಿಮ್‌ನಲ್ಲಿ ಬ್ಯುಸಿಯಾಗಿರುವ ದಿಶಾ, ಬೀಚ್‌ಗಳಲ್ಲಿ ಕಾಲ ಕಳೆಯಲು ಇಷ್ಟಪಡುತ್ತಾರೆ. ಹಾಗಾಗಿ, ಬಹುತೇಕ ಸಂದರ್ಭದಲ್ಲಿ ಬೀಚ್‌ನಲ್ಲಿ ಬಿಕಿನಿ ಉಡುಗೆಗಳ ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುತ್ತಿರುತ್ತಾರೆ.

ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್ ಜೊತೆಯಾಗಿ ಮೋಹಿತ್ ಸೂರಿ ಅವರ ಆಕ್ಷನ್ ಥ್ರಿಲ್ಲರ್ ಮಲಂಗ್ ಚಿತ್ರದಲ್ಲಿ ದಿಶಾ ಪಟಾನಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಪ್ರಭು ದೇವ ನಿರ್ದೆಶನದ ‘ರಾಧೆ’ಅವರ ಮುಂಬರುವ ಚಿತ್ರವಾಗಿದೆ. ಈ ಮೂಲಕ ಎರಡನೇ ಬಾರಿಗೆ ಸಲ್ಮಾನ್ ಖಾನ್ ಜೊತೆ ದಿಶಾ ಪಟಾನಿ ಬಣ್ಣ ಹಚ್ಚುತ್ತಿದ್ದಾರೆ. 2019ರ ಭರತ್ ಚಿತ್ರದಲ್ಲಿ ಈ ಇಬ್ಬರು ಜೊತೆಯಾಗಿ ನಟಿಸಿದ್ದರು. ಇದೇ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಟಬು ಕೂಡ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT