ಕೊರೊನಾ ಸೋಂಕು, ಆತ್ಮಹತ್ಯೆ ಮತ್ತು ಸಾಲು, ಸಾಲು ಸಾವುಗಳಿಂದ ತತ್ತರಿಸಿದ ಬಾಲಿವುಡ್ನಿಂದ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಒಂದೂವರೆ ವರ್ಷದಿಂದ ಕ್ಯಾನ್ಸರ್ನೊಂದಿಗೆ ಹೋರಾಟ ನಡೆಸಿದ್ದ 28 ವರ್ಷದ ಯುವನಟಿ, ಗಾಯಕಿ ದಿವ್ಯಾ ಚೌಕ್ಸೆ ಭಾನುವಾರ ಸಾವಿಗೆ ಶರಣಾಗಿದ್ದಾರೆ. ಸಾಯುವ ಹಿಂದಿನ ದಿನ ಕೊನೆಯದಾಗಿ ಅವರು ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಬರೆದ ವಿದಾಯದ ಭಾವುಕ ಸಾಲುಗಳು ಎಲ್ಲರ ಕಣ್ಣು ಒದ್ದೆ ಮಾಡುತ್ತವೆ.

‘ನಾನು ಅನುಭವಿಸುತ್ತಿರುವ ನೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಪದಗಳು ಸಾಲುತ್ತಿಲ್ಲ. ನನಗೆ ಕ್ಯಾನ್ಸರ್ ಇತ್ತು. ರೋಗ ತಿಂಗಳ ಹಿಂದೆ ಬಿಗಡಾಯಿಸಿತು.ಇನ್ನು ಹೆಚ್ಚು ದಿನ ಬದುಕುವುದಿಲ್ಲ. ಸಾವಿನ ಅಂಚಿನಲ್ಲಿದ್ದೇನೆ. ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ ಬಂದಿದೆ’ ಎಂದು ಬರೆದಿದ್ದಾರೆ.

ದಿವ್ಯಾ ಚೌಕ್ಸಿ ಕೊನೆಯ ಇನ್ಸ್ಟಾಗ್ರಾಂ ಸ್ಟೋರಿ

ನೋವಿಲ್ಲದ ಜೀವನ ನನ್ನದಾಗಲಿ

‘ಕೆಟ್ಟ ಘಟನೆ ನನ್ನ ಜೀವನದಲ್ಲಿ ಸಂಭವಿಸುತ್ತಿದೆ. ಬರುವ ಕಷ್ಟವನ್ನು ಧೈರ್ಯದಿಂದ ಎದುರಿಸುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ನೋವಿಲ್ಲದ ಜೀವನ ನನ್ನದಾಗಲಿ. ದಯವಿಟ್ಟು ಯಾವ ಪ್ರಶ್ನೆಗಳನ್ನೂ ಕೇಳಬೇಡಿ. ನೀವೆಲ್ಲರೂ ನನಗೆ ಎಷ್ಟು ಮುಖ್ಯ ಎನ್ನುವುದು ದೇವರಿಗೆ ತಿಳಿದಿದೆ’ ಎಂದು ದಿವ್ಯಾ ವಿದಾಯ ಹೇಳಿದ್ದಾರೆ.

ಈ ಪೋಸ್ಟ್ ಮಾಡಿದ ಮರುದಿನವೇ ದಿವ್ಯಾ ಮೃತಪಟ್ಟಿದ್ದಾರೆ. ಹಾಗಾಗಿ ಈ ಪೋಸ್ಟ್ ವೈರಲ್ ಆಗಿದೆ. ಆಕೆ ಪಿತ್ತಜನಕಾಂಗ ಕ್ಯಾನ್ಸರ್ನಿಂದ ಬಳಲುತ್ತಿದ್ದರು.

‘ದಿವ್ಯಾಗೆ ಇನ್ನೂ 28 ವರ್ಷ.ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ಮೃತಪಟ್ಟಿದ್ದಾರೆ. ಈವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ‘ಹೈ ಅಪ್ನಾ ದಿಲ್ ತೋ ಆವಾರ’ ಚಿತ್ರದ ನಿರ್ದೇಶಕಮೊಂಜಾಯ್ ಮುಖರ್ಜಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.ದಿವ್ಯಾ ‘ಹೈ ಅಪ್ನಾ ದಿಲ್ ತೋ ಆವಾರ’ ಚಿತ್ರದ ಮೂಲಕಬಾಲಿವುಡ್ಗೆ ಕಾಲಿಟ್ಟಿದ್ದರು.

’ಒಂದೂವರೆ ವರ್ಷದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ದಿವ್ಯಾ, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ತಿಂಗಳ ಹಿಂದೆ ಗುಣಮುಖರಾಗಿದ್ದರು.ಆದರೆ, ಇದ್ದಕ್ಕಿದ್ದಂತೆ ಮತ್ತೆ ಆನಾರೋಗ್ಯಕ್ಕೆ ತುತ್ತಾದ ಅವರು, ಮತ್ತೆ ಹುಷಾರಾಗಲೇ ಇಲ್ಲ‘ ಎಂದು ನಿರ್ದೇಶಕಮೊಂಜಾಯ್ ಕಂಬನಿ ಮಿಡಿದ್ದಾರೆ.

ಮೂಲತಃ ಮಧ್ಯ ಪ್ರದೇಶದ ಭೋಪಾಲ್ನ ದಿವ್ಯಾ, ಬ್ರಿಟನ್ ವಿಶ್ವವಿದ್ಯಾಲಯದಿಂದ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಭಾರತಕ್ಕೆ ಮರಳಿದ ನಂತರ ರೂಪದರ್ಶಿಯಾಗಿ ವೃತ್ತಿ ಜೀವನ ಆರಂಭಿಸಿದ ದಿವ್ಯಾ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಥಕ್ ಮತ್ತು ಸಾಲ್ಸಾ ಡಾನ್ಸರ್ ಆಗಿದ್ದ ಆಕೆ ಅನೇಕ ಜಾಹೀರಾತುಗಳಲ್ಲಿಯೂ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.