ಭಾನುವಾರ, ಮೇ 29, 2022
31 °C

‘ಡೋಸ್’ ಕೊಡಲು ಸಿದ್ಧವಾಯಿತು ಈ ತಂಡ: ಬರಲಿದೆ ಸಸ್ಪೆನ್ಸ್, ಥ್ರಿಲ್ಲರ್‌ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಸ್ಪೆನ್ಸ್, ಥ್ರಿಲ್ಲರ್‌, ಸೂಪರ್‌ ನ್ಯಾಚುರಲ್‌ ವಿಷಯವನ್ನು ಮುಂದಿಟ್ಟುಕೊಂಡು ಸಿದ್ಧವಾಗುತ್ತಿದೆ ‘ಡೋಸ್‌’ ಚಿತ್ರ. ಇಂಥ ಚಿತ್ರಗಳು ಈಗಾಗಲೇ ಬಂದಿವೆ. ಆದರೆ ಈ ಚಿತ್ರದ ನಿರೂಪಣೆ ವಿಶಿಷ್ಟವಾಗಿದೆ ಎಂದಿದೆ ನಿರ್ಮಾಣ ತಂಡ.

ಚಿತ್ರದ ಮೊದಲ ಥೀಮ್ ಪೋಸ್ಟರನ್ನು ನಿರ್ದೇಶಕ ಸಿಂಪಲ್ ಇತ್ತೀಚೆಗೆ ಬಿಡುಗಡೆ ಮಾಡಿದರು. ಕಾನಿ ಸ್ಟುಡಿಯೋ ಈ ಪೋಸ್ಟರ್‌ ವಿನ್ಯಾಸ ಮಾಡಿದೆ. 

ಧನಂಜಯ ದಿಡಗ ಈ ಚಿತ್ರದ ನಿರ್ದೇಶಕರು. ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ‌ ಮತ್ತು ಕನ್ನಡದದ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ, ಗೀತರಚನೆಕಾರರಾಗಿ ಕೆಲಸ ಮಾಡಿದ ಅನುಭವ ಅವರದ್ದು. ದಿಡಗ ಅವರು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. 

‘ಗರುಡ ಗಮನ ವೃಷಭ’ ವಾಹನ ಚಿತ್ರದ ಖ್ಯಾತಿಯ ಗೋಪಾಲಕೃಷ್ಣ ದೇಶಪಾಂಡೆ, ‘ಒನ್ ಲವ್ ಟು ಸ್ಟೋರಿ’ ಚಿತ್ರದ ನಾಯಕ ನಟರಾಗಿದ್ದ ಸಂತೋಷ್ ಕುಮಾರ್, ‘ಲೈಫ್ 360’ ಚಿತ್ರದ ನಾಯಕ ನಟರಾಗಿದ್ದ ಅರ್ಜುನ್ ಕಿಶೋರ್ ಚಂದ್ರ, ಬಬ್ಲುಷ ಚಿತ್ರದ ನಾಯಕ ನಟರಾಗಿದ್ದ ಹರ್ಷ್ ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಸಾಯಿ ಹರ್ಷ, ಸಂತು ಗೌಡ, ದರ್ಶನ್, ಸವಿತಾ ಹಿರೇಮಠ, ಆರ್ಯ ಅವರ ತಾರಾಬಳಗವಿದೆ. .

ನವೀನ್ ಸೂರ್ಯ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೆಂಕಟೇಶ್ ಯುಡಿವಿ ಸಂಕಲನವಿದೆ. ಮತ್ತು ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿ ಭೀಮೇಶ್, ಹರ್ಷ, ಅಪ್ಪು ಶಂಕರ್, ಭರತ್, ರಂಜಿತ್, ಕೆಲಸ ಮಾಡುತ್ತಿದ್ದಾರೆ. ಫೆಬ್ರುವರಿಯಲ್ಲಿ ಕುಂದಾಪುರ ಪ್ರದೇಶದಲ್ಲಿ ಶೂಟಿಂಗ್‌ ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು