ಮಂಗಳವಾರ, ಆಗಸ್ಟ್ 4, 2020
22 °C

ಡ್ರೀಮ್‌ ಗರ್ಲ್‌ ಫಿಟ್‌ ಆ್ಯಂಡ್‌ ಫೈನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೊರೊನಾ ಪಾಸಿಟಿವ್‌ ವರದಿಯಾದ ಬೆನ್ನಲ್ಲೇ ಬಾಲಿವುಡ್‌ನಲ್ಲಿ ಅನೇಕರ ಹೆಸರು ಕೊರೊನಾ ಪಾಸಿಟಿವ್ ಪಟ್ಟಿಯಲ್ಲಿ ಕೇಳಿಬಂದಿತ್ತು. 71 ವರ್ಷದ  ಹಿರಿಯ ನಟಿ ಹೇಮಾಮಾಲಿನಿ ಕೂಡ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿತ್ತು. ಈಗ ಅದು ಗಾಳಿ ಸುದ್ದಿ ಎಂದು ಅವರ ಮಗಳು ಇಶಾ ಡಿಯೋಲ್‌ ಸ್ಪಷ್ಟಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ತಪ್ಪು ಮಾಹಿತಿಗೆ ಪ್ರತಿಕ್ರಿಯಿಸಬೇಡಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ . ‘ನನ್ನ ಅಮ್ಮ ಡ್ರೀಮ್‌ಗರ್ಲ್‌ ಹೇಮಾ ಫಿಟ್‌ ಆ್ಯಂಡ್‌ ಫೈನ್‌. ಅವರ ಆರೋಗ್ಯದ ಕುರಿತಾದ ಸುದ್ದಿ ಖಂಡಿತಾ ಸುಳ್ಳು’ ಎಂದು ಟ್ವೀಟ್‌ ಮಾಡಿದ್ದಾರೆ. 

ಇಶಾ ಟ್ವೀಟ್‌ ಮಾಡಿದ ಬೆನ್ನಲ್ಲೇ ನಟಿ ಹೇಮಾ ಮಾಲಿನಿ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ‘ಕೃಷ್ಣನ ದಯೆಯಿಂದ ನಾನು ಸಂಪೂರ್ಣ ಆರಾಮವಾಗಿದ್ದೇನೆ’ ಎಂದು ಸ್ಪಷ್ಟನೆ ನೀಡಿರುವ ವಿಡಿಯೊ ಹಂಚಿಕೊಂಡಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು