ಬುಧವಾರ, ಮಾರ್ಚ್ 3, 2021
29 °C

ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್‌ಗೆ ಎನ್‌ಸಿಬಿ ವಿಚಾರಣೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್ ಅವರು ಸೋಮವಾರ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮುಂದೆ ವಿಚಾರಣೆಗೆ ಹಾಜರಾದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ರಾಮ್‌ಪಾಲ್ ಅವರನ್ನು ಎನ್‌ಸಿಬಿ ಅಧಿಕಾರಿಗಳು ಪ್ರಶ್ನಿಸಿದರು. ಎನ್‌ಸಿಬಿ ಈಗಾಗಲೇ ರಾಮ್‌ಪಾಲ್ ಮತ್ತವರ ಗೆಳತಿ ಗ್ಯಾಬ್ರಿಯೆಲಾ ಡಿಮೆಟ್ರಿಯೇಡ್ಸ್ ಅವರನ್ನು ವಿಚಾರಣೆ ನಡೆಸಿ ಪ್ರಕರಣದಲ್ಲಿ ಗ್ಯಾಬ್ರಿಯೆಲಾ ಸಹೋದರನನ್ನು ಬಂಧಿಸಿತ್ತು.

ಕಳೆದ ತಿಂಗಳು ಮಾದಕವಸ್ತು ನಿಯಂತ್ರಣ ದಳವು ಬಾಂದ್ರಾದಲ್ಲಿರುವ ರಾಮ್‌ಪಾಲ್ ನಿವಾಸದಲ್ಲಿ ಶೋಧ ನಡೆಸಿ, ಎನ್‌ಡಿಪಿಎಸ್ ಕಾಯ್ದೆಯಡಿ ನಿರ್ಬಂಧಿಸಲಾಗಿರುವ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು ಹಾಗೂ ಕೆಲವು ಔಷಧಿಗಳನ್ನು ವಶಪಡಿಸಿತ್ತು.

ಈ ಹಿಂದೆ ನವೆಂಬರ್ 13ರಂದು ಸುಮಾರು ಏಳು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಅರ್ಜುನ್ ಗೆಳತಿ ಗ್ಯಾಬ್ರಿಯೆಲಾ ಅವರನ್ನು ಎರಡು ದಿನ ಎನ್‌ಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಇದನ್ನೂ ಓದಿ: 

ಡ್ರಗ್ಸ್ ಜಾಲ ಪ್ರಕರಣದಲ್ಲಿ ಗ್ಯಾಬ್ರಿಯೆಲಾ ಸಹೋದರ ಅಜಿಸಿಲಾವಸ್ ಡಿಮೆಟ್ರಿಯೇಡ್ಸ್ ಭಾಗಿಯಾಗಿರುವುದನ್ನು ಪತ್ತೆ ಹಚ್ಚಿದ ನಂತರ ಎನ್‌ಸಿಬಿ ರಾಮ್‌ಪಾಲ್ ಹಾಗೂ ಗೆಳತಿಯನ್ನು ವಿಚಾರಣೆಗೊಳಪಡಿಸಿತ್ತು. ಅವರು ಅನೇಕ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 17ರಂದು ಅಜಿಸಿಲಾವಸ್ ಅವರನ್ನು ಲೋನಾವಾಲಾದ ರೆಸಾರ್ಟ್‌ನಿಂದ ಬಂಧಿಸಲಾಯಿತು. ನಟ ಸುಶಾಂತ್‌ ರಜಪೂತ್ ಸಾವಿನ ಬಳಿಕ ಡ್ರಗ್ಸ್ ಜಾಲ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ, ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಇದುವರೆಗೆ 28 ಮಂದಿಯನ್ನು ಬಂಧಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು