ಮಂಗಳವಾರ, ನವೆಂಬರ್ 12, 2019
20 °C

ಡ್ರಮ್ಮರ್‌ ದೇವ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Published:
Updated:

ಅಂತರರಾಷ್ಟ್ರೀಯ ಖ್ಯಾತಿಯ ಡ್ರಮ್ಮರ್‌ ದೇವ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಆಗಸ್ಟ್ 28ರಂದು ತಲೆ ತಿರುಗಿ ಬಿದ್ದಿದ್ದರು. ಹಾಗಾಗಿ, ಅವರ ತಲೆಗೆ ಪೆಟ್ಟಾಗಿತ್ತು. ಕೂಡಲೇ ಕುಟುಂಬದ ಸದಸ್ಯರು ಅವರನ್ನು ಅಟ್ರಿಯಮ್ ಆಸ್ಪತ್ರೆಗೆ ದಾಖಲಿಸಿದ್ದರು. ಅವರಿಗೆ 103 ಡಿಗ್ರಿ ಜ್ವರ ಇದ್ದು, ದೇಹದಲ್ಲಿ ಶುಗರ್ ಪ್ರಮಾಣ 500ಕ್ಕಿಂತ ಹೆಚ್ಚಿದೆಯಂತೆ. 

‘ನಾನು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಕೆಪಿಎಲ್‌ ಸೆಮಿಫೈನಲ್‌ ಮತ್ತು ಫೈನಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಫೇಸ್‌ಬುಕ್‌ನಲ್ಲಿ ದೇವ ಬರೆದುಕೊಂಡಿದ್ದಾರೆ.

‘5 ಈಡಿಯಟ್ಸ್‌’, ‘ಪ್ರೀತಿ ನೀ ಹೀಂಗ್ಯಾಕೆ’, ‘ಹೃದಯಗಳ ವಿಷಯ’ ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸಿದ್ದಾರೆ.

ಪ್ರತಿಕ್ರಿಯಿಸಿ (+)