ಮದ್ವೆ ಆಗ್ತಿದ್ದಾರೆ ಆ್ಯಕ್ಷನ್‌ ಪ್ರಿನ್ಸ್: ಧ್ರುವ ಬದುಕಿಗೆ ಹೊಸ ’ಪ್ರೇರಣೆ’

7
ಬಾಲ್ಯದ ಗೆಳತಿ

ಮದ್ವೆ ಆಗ್ತಿದ್ದಾರೆ ಆ್ಯಕ್ಷನ್‌ ಪ್ರಿನ್ಸ್: ಧ್ರುವ ಬದುಕಿಗೆ ಹೊಸ ’ಪ್ರೇರಣೆ’

Published:
Updated:

ಬೆಂಗಳೂರು: ಅದ್ದೂರಿ, ಬಹದ್ದೂರ್‌, ಭರ್ಜರಿ ಸಿನಿಮಾಗಳ ಹೀರೊ, ಆ್ಯಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಅವರಿಗೆ ಕಂಕಣ ಕೂಡಿ ಬಂದಿದೆ. ಧ್ರುವ ಬದುಕಿಗೆ ಹೊಸ ಪ್ರೇರಣೆ ಸಿಕ್ಕಿದೆ. ಯಾವುದೀ ಪ್ರೇರಣೆ. ಅದು ಭಜರಂಗಿ ಭಕ್ತ ವರಿಸಲಿರುವ ಹುಡುಗಿಯ ಹೆಸರು! ಹೌದು, ಧ್ರುವ ಸರ್ಜಾ ಅವರು ಪ್ರೇರಣಾ ಎಂಬ ತಮ್ಮ ಬಾಲ್ಯಸ್ನೇಹಿತೆಯನ್ನೇ ಮದುವೆಯಾಗಲಿದ್ದಾರೆ. ಡಿ. 9ಕ್ಕೆ ಬನಶಂಕರಿಯ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ. 

ರವಿಶಂಕರ್‌ ಮತ್ತು ಸರಿತಾ ದಂಪತಿಯ ಪುತ್ರಿಯಾಗಿರುವ ಪ್ರೇರಣಾ, ಧ್ರುವ ಸರ್ಜಾ ನೆರೆಮನೆಯ ಹುಡುಗಿ. ಬಾಲ್ಯವನ್ನು ಅವರು ಒಟ್ಟಿಗೆ ಕಳೆದಿದ್ದಾರೆ. ಎರಡು ದಶಕಕ್ಕೂ ಮೀರಿದ ಪರಿಚಯ ಅವರದ್ದು. ಕಳೆದು ಎಂಟು ವರ್ಷಗಳಲ್ಲಿ ಪರಿಚಯ ಪ್ರೇಮಕ್ಕೆ ತಿರುಗಿ ಈಗ ಮದುವೆಯವರೆಗೂ ಬಂದು ನಿಂತಿದೆ. 

ಪ್ರೇರಣಾ ಮತ್ತು ಧ್ರುವ ಶಾಲಾದಿನಗಳಲ್ಲಿ ಸಹಪಾಠಿಗಳೂ ಹೌದು. ಪ್ರೇರಣಾ ಖಾಸಗಿ ಕಾಲೇಜಲೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದುವರೆಗೆ ಇವರಿಬ್ಬರ ಪ್ರೇಮದ ಬಗ್ಗೆ ಹೊರಜಗತ್ತಿಗೆ ಯಾವ ಸುಳಿವನ್ನೂ ನೀಡಿರಲಿಲ್ಲ. ಈಗ ಎರಡೂ ಮನೆಯವರನ್ನು ಒಪ್ಪಿಸಿರುವ ಈ ಪ್ರೇಮಪಕ್ಷಿಗಳು ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ.

ಇತ್ತೀಚೆಗೆ ಧ್ರುವ ಸರ್ಜಾ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಮದುವೆಯ ಬಗ್ಗೆ ಸುಳಿವು ನೀಡಿದ್ದರು. ‘ಮೂವತ್ತು ವರ್ಷದ ಒಳಗಡೆಯೇ ನಾನು ಮದುವೆ ಆಗ್ತೀನಿ. ಅದೂ ಪ್ರೇಮವಿವಾಹವನ್ನೇ ಆಗುತ್ತೇನೆ’ ಎಂದು ಹೇಳಿದ್ದರು ಧ್ರುವ. 

ಸದ್ಯಕ್ಕೆ ಧ್ರುವ ‘ಪೊಗರು’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕೆಲಸ ಮುಗಿದ ಮೇಲೆ ಧ್ರುವ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಆದರೆ ಧ್ರುವ ಸರ್ಜಾ ಕುಟುಂಬ ಇದುವರೆಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. 

ಬರಹ ಇಷ್ಟವಾಯಿತೆ?

 • 31

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !