ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ದಿನಗಳಲ್ಲಿ ₹256 ಕೋಟಿ ಗಳಿಸಿದ ಶಾರುಕ್‌ ಖಾನ್ ಅಭಿನಯದ ‘ಡಂಕಿ’

Published 26 ಡಿಸೆಂಬರ್ 2023, 13:48 IST
Last Updated 26 ಡಿಸೆಂಬರ್ 2023, 13:48 IST
ಅಕ್ಷರ ಗಾತ್ರ

ಮುಂಬೈ: ಶಾರುಕ್ ಖಾನ್ ಅಭಿನಯದ ಹಿಂದಿ ಸಿನಿಮಾ ‘ಡಂಕಿ’ ಬಿಡುಗಡೆಯಾದ 5 ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹256 ಕೋಟಿ ಗಳಿಕೆ ಕಂಡಿದೆ.

ನೈಜ ಘಟನೆ ಆಧರಿತ ಈ ಚಿತ್ರವನ್ನು ರಾಜಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ.

ಬಾಕ್ಸ್ ಆಫೀಸ್‌ ಗಳಿಕೆ ಕುರಿತಂತೆ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ಎಕ್ಸ್‌ ಪುಟದಲ್ಲಿ ಮಾಹಿತಿ ಹಂಚಿಕೊಂಡಿದೆ.

'ಯೇ ಕಹಾನಿ ಬಡಿ ಪ್ಯಾರಿ ಹೈ. ತಭಿ ತೋ... ಆಪ್ಕಾ ಪ್ಯಾರ್ ಮಿಲ್ನಾ ಜಾರಿ ಹೈ’ ಎಂದು ಚಿತ್ರ ನಿರ್ಮಾಣ ಸಂಸ್ಥೆ ಪೋಸ್ಟ್‌ನಲ್ಲಿ ಹೇಳಿದ್ದು, ಚಿತ್ರವು ವಿಶ್ವದಾದ್ಯಂತ ₹256.40 ಕೋಟಿ ಗಳಿಸಿದೆ ಎಂದು ತಿಳಿಸಿದೆ.

2023ರಲ್ಲಿ ಬಿಡುಗಡೆಯಾಗಿ ₹1,000 ಕೋಟಿಗೂ ಅಧಿಕ ಗಳಿಕೆ ಕಂಡ ಶಾರುಕ್ ಖಾನ್ ಅವರ ಪಠಾಣ್ ಮತ್ತು ಜವಾನ್ ಚಿತ್ರಗಳಷ್ಟು ಡಂಕಿ ಜನಪ್ರಿಯತೆ ಗಳಿಸಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಚಿತ್ರವು ‘ಡಾಂಕಿ ಫ್ಲೈಟ್’ಎಂಬ ಅಕ್ರಮ ವಲಸೆ ತಂತ್ರಗಾರಿಕೆಯ ಕಥಾಹಂದರವನ್ನು ಹೊಂದಿದ್ದು, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ ಕೊಚ್ಚಾರ್ ಮತ್ತು ಅನಿಲ್ ಗ್ರೋವರ್ ತಾರಾಗಣವಿದೆ.

ಪ್ರಭಾಸ್, ಪ್ರಥ್ವಿರಾಜ್ ಸುಕುಮಾರನ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದಿಂದ ‘ಡಂಕಿ’ ಕಠಿಣ ಸ್ಪರ್ಧೆ ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT