ಶನಿವಾರ, ನವೆಂಬರ್ 28, 2020
25 °C

ಮುಂದುವರಿದ ‘ಏಕ್‌ ಲವ್‌ಯಾ’ ಶೂಟಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಏಕ್‌ ಲವ್‌ಯಾ ಚಿತ್ರದ ಶೂಟಿಂಗ್‌ನ್ನು ನಿರ್ದೇಶಕ ಪ್ರೇಮ್‌ ಅವರ ತಂಡ ಇತ್ತೀಚೆಗೆ ಮತ್ತೆ ಮುಂದುವರಿಸಿದೆ. 

ಯೂರೋಪ್‌ ದೇಶಗಳಲ್ಲಿ ಈ ವರ್ಷದ ಆರಂಭದಲ್ಲಿ ಶೂಟಿಂಗ್‌ ಆರಂಭವಾಗಿತ್ತು. ಆದರೆ, ಕೋವಿಡ್‌ ಕಾರಣದಿಂದ ಶೂಟಿಂಗ್‌ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ಬಳಿಕ ತಂಡವು ಬಾಕಿ ಉಳಿದ (ಹಾಡಿನ ಭಾಗದ) ಚಿತ್ರೀಕರಣ ಮುಂದುವರಿಸಿದೆ. 

ರೀಷ್ಮಾ ನಾನಯ್ಯ ಮತ್ತು ರಾಣಾ ಮತ್ತು ರಚಿತಾರಾಮ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಉಳಿದ ಭಾಗಗಳನ್ನು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ತಂಡ ಹೇಳಿಕೊಂಡಿದೆ. ಇದಕ್ಕಾಗಿ ಲೊಕೇಶನ್‌ ನೋಡಲು ಪ್ರೇಮ್‌ ನೇತೃತ್ವದ ತಂಡ ಕಾಶ್ಮೀರದ ಲಡಾಖ್‌‌ಗೆ ತೆರಳಿದೆ. 

ಈ ತಿಂಗಳ ಕೊನೆ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಈ ಹಾಡಿನ ಭಾಗದ ಚಿತ್ರೀಕರಣ ಮುಗಿಯಬಹುದು ಎಂದು ಚಿತ್ರತಂಡ ಲೆಕ್ಕಾಚಾರ ಹಾಕಿದೆ. 

ಯುವ ಜೋಡಿಯ ಪ್ರೇಮ ಕಥೆಯ ವಸ್ತು ಏಕ್‌ ಲವ್‌ಯಾ ಚಿತ್ರದ್ದು. ರಕ್ಷಿತಾ ಪ್ರೇಂ ಚಿತ್ರ ನಿರ್ಮಿಸುತ್ತಿದ್ದಾರೆ. ಅಂದಹಾಗೆ ಇದು ರಾಣಾ ಅವರ ಮೊದಲ ಚಿತ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು