ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಶವವಾಗಿ ಪತ್ತೆ

Published 2 ಆಗಸ್ಟ್ 2023, 5:26 IST
Last Updated 2 ಆಗಸ್ಟ್ 2023, 5:26 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ ಮುಂಬೈನ ಕರ್ಜಾತ್‌ನಲ್ಲಿರುವ ಅವರ ಎನ್‌ಡಿ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಲಗಾನ್ ಮತ್ತು ಜೋಧಾ ಅಕ್ಬರ್‌ನಲ್ಲಿನ ಕೆಲಸಕ್ಕಾಗಿ ಅವರು ಹೆಚ್ಚು ಖ್ಯಾತಿ ಗಳಿಸಿದ್ದರು.

ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ನಿತಿನ್ ದೇಸಾಯಿ ಅವರು ಅನುಭವಿ ಚಿತ್ರ ನಿರ್ದೇಶಕರಾದ ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಕೆಲಸ ಮಾಡಿದ್ದರು. 1942: ಎ ಲವ್ ಸ್ಟೋರಿ, ಹಮ್ ದಿಲ್ ದೇ ಚುಕೆ ಸನಮ್ (1999), ದೇವದಾಸ್ (2002) ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ (2010)ನಂತಹ ಐಕಾನಿಕ್ ಬಾಲಿವುಡ್ ಚಲನಚಿತ್ರಗಳ ಸೆಟ್‌ಗಳ ಹಿಂದೆ ಅವರ ಕೈಚಳಕ ಅಡಗಿತ್ತು.

2019ರಲ್ಲಿ ಬಿಡುಗಡೆಯಾದ ಪಾಣಿಪತ್ ಅವರು ಕಲಾ ನಿರ್ದೇಶಕರಾಗಿ ಅವರು ಕೆಲಸ ಮಾಡಿದ ಕೊನೆಯ ಚಿತ್ರ. ಈ ಚಿತ್ರವನ್ನು ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT