ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ದಿನ ದಾಖಲೆ: ₹100 ಕೋಟಿ ಗಳಿಕೆಯತ್ತ 'ಫೈಟರ್'

Published 28 ಜನವರಿ 2024, 9:34 IST
Last Updated 28 ಜನವರಿ 2024, 9:34 IST
ಅಕ್ಷರ ಗಾತ್ರ

ನವದೆಹಲಿ: ಹೃತಿಕ್‌ ರೋಷನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಫೈಟರ್‌’ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ₹93.40 ಕೋಟಿ ದಾಖಲೆಯ ಗಳಿಕೆ ಕಂಡಿದೆ ಎಂದು ಚಿತ್ರ ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.

ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ ಈ ಚಿತ್ರದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಕಥೆಯನ್ನು ತೆರೆಯ ಮೇಲೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.

ಜ.25ರಂದು ತೆರೆ ಕಂಡ ಈ ಚಿತ್ರ ಮೊದಲ ದಿನ ₹24.60 ಕೋಟಿ ಸಂಗ್ರಹಿಸಿತ್ತು. 2ನೇ ದಿನ ₹41.20 ಕೋಟಿ ಗಳಿಕೆಯೊಂದಿಗೆ ಒಟ್ಟು ಮೊತ್ತ ₹65.80 ಕೋಟಿಗೆ ಏರಿತ್ತು. 3ನೇ ದಿನವಾದ ಶನಿವಾರ ₹27.60 ಕೋಟಿ ಗಳಿಸಿದೆ. ಈ ಮೂಲಕ 3 ದಿನಗಳಲ್ಲಿ ಒಟ್ಟು ಕಲೆಕ್ಷನ್‌ ₹93.40 ಕೋಟಿಗೆ ತಲುಪಿದೆ. ಸದ್ಯದಲ್ಲೇ ಸಿನಿಮಾ ₹100 ಕೋಟಿ ಕ್ಲಬ್‌ ಸೇರುವ ನಿರೀಕ್ಷೆಯಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.

ವಾಯುಪಡೆಯ ಅಧಿಕಾರಿ ಮಿನಲ್‌ ರಾಥೋರ್‌ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರೆ, ಶ್ಯಾಮ್‌ಶೇರ್‌ ಪಟಾನಿಯಾ ಪಾತ್ರದಲ್ಲಿ ಹೃತಿಕ್‌ ರೋಷನ್‌ ಅಭಿನಯಿಸಿದ್ದಾರೆ. ನಟ ಅನಿಲ್‌ ಕಪೂರ್‌ ವಾಯುಪಡೆಯ ಅಧಿಕಾರಿ (ಐಎಎಫ್) ರಾಕೇಶ್‌ ಜೈ ಸಿಂಗ್‌ (ರಾಕಿ) ಪಾತ್ರದಲ್ಲಿ ನಟಿಸಿದ್ದಾರೆ.

ಇವರಲ್ಲದೇ ಚಿತ್ರದಲ್ಲಿ ಅಕ್ಷಯ್ ಒಬೆರಾಯ್, ಕರಣ್ ಸಿಂಗ್ ಗ್ರೋವರ್, ಸಂಜೀದಾ ಶೇಖ್ ಹಾಗೂ ರಿಷಬ್ ಸಾಹ್ನಿ ಕೂಡ ನಟಿಸಿದ್ದಾರೆ.

ಚಿತ್ರವನ್ನು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT