ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ

Last Updated 24 ಮಾರ್ಚ್ 2023, 6:00 IST
ಅಕ್ಷರ ಗಾತ್ರ

ಮುಂಬೈ: ‘ಪರಿಣೀತಾ’ ಚಿತ್ರ ಖ್ಯಾತಿಯ ಬಾಲಿವುಡ್‌ ನಿರ್ದೆಶಕ ಪ್ರದೀಪ್ ಸರ್ಕಾರ್ ಶುಕ್ರವಾರ ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಪತ್ನಿ ಪಾಂಚಾಲಿ ತಿಳಿಸಿದ್ದಾರೆ.

67 ವರ್ಷದ ಅವರನ್ನು ಜ್ವರದ ಹಿನ್ನೆಲೆಯಲ್ಲಿ ಬಾಂದ್ರಾದ ಲೀಲಾವತಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಬೆಳಗಿನ ಜಾವ 3.10ರಿಂದ 3.30ರ ನಡುವೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ.

ಮಾರ್ಚ್ 22 ರಂದು ಅವರಿಗೆ ವೈರಲ್ ಜ್ವರ ಕಾಣಿಸಿಕೊಂಡಿತ್ತು. ಕೆಲವು ಔಷಧಿಗಳನ್ನು ನೀಡಿದ ನಂತರ ಅವರ ಜ್ವರ ಕಡಿಮೆಯಾಗಿತ್ತು. ಆದರೆ ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅವರು ಹೇಳಿದರು.

ಪ್ರದೀಪ್‌ ಸರ್ಕಾರ್ 2005 ರಲ್ಲಿ ‘ಪರಿಣೀತಾ’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ‘ಲಾಗಾ ಚುನರಿ ಮೇ ದಾಗ್’ (2007), ‘ಲಫಂಗೆ ಪರಿಂದೆ’ (2010), ‘ಮರ್ದಾನಿ’ (2014), ಮತ್ತು ‘ಹೆಲಿಕಾಪ್ಟರ್ ಈಲಾ’ ( 2018) ಅವರ ನಿರ್ದೇಶನದ ಚಿತ್ರಗಳು.

ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸರ್ಕಾರ್ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಜಯ್ ದೇವಗನ್ ಹೇಳಿದ್ದಾರೆ.

‘ನಮ್ಮಲ್ಲಿ ಕೆಲವರಿಗೆ 'ದಾದಾ' ಆಗಿದ್ದ ಪ್ರದೀಪ್ ಸರ್ಕಾರ್ ಅವರ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಕಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ದೇವಗನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT