ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲೆನಾಡ ಗೊಂಬೆ’ಗೆ ಉಪೇಂದ್ರ ಬೆಂಬಲ

Published 8 ಫೆಬ್ರುವರಿ 2024, 2:12 IST
Last Updated 8 ಫೆಬ್ರುವರಿ 2024, 2:12 IST
ಅಕ್ಷರ ಗಾತ್ರ

ಈ ಹಿಂದೆ ‘ರಾಜಹಂಸ’ ಚಿತ್ರದಲ್ಲಿ ನಟಿಸಿದ್ದ ಗೌರಿಶಂಕರ್‌ ಹಾಗೂ ಬಿಂದು ಶಿವರಾಂ ಜೋಡಿಯಾಗಿ ನಟಿಸಿರುವ ‘ಕೆರೆಬೇಟೆ’ ಚಿತ್ರದ ‘ಮಲೆನಾಡ ಗೊಂಬೆ’ ಎಂಬ ಹಾಡನ್ನು ಇತ್ತೀಚೆಗಷ್ಟೇ ನಟ ಉಪೇಂದ್ರ ಬಿಡುಗಡೆ ಮಾಡಿದರು.


‘ಚಿತ್ರದ ಟೀಸರ್‌ ನೋಡಿದೆ. ಬಹಳ ಚೆನ್ನಾಗಿದೆ. ಹಾಡು ಕೂಡ ಸೊಗಸಾಗಿ ಮೂಡಿಬಂದಿದೆ. ಮಲೆನಾಡಿನ ಸುಂದರ ಚಿತ್ರಣವಿದೆ. ಈ ತಂಡ ಇನ್ನೊಂದಷ್ಟು ಸಿನಿಮಾ ಮಾಡುವ ರೀತಿಯಲ್ಲಿ ಹರಸಿ. ಚಿತ್ರಮಂದಿರಕ್ಕೇ ಬಂದು ಈ ಸಿನಿಮಾ ನೋಡಿ’ ಎಂದು ಉಪೇಂದ್ರ ತಂಡಕ್ಕೆ ಶುಭ ಹಾರೈಸಿದರು.

ಈಗಾಗಲೇ ಟೀಸರ್‌ನಿಂದ ಗಮನ ಸೆಳೆದಿರುವ ಈ ಚಿತ್ರಕ್ಕೆ ರಾಜ್‌ಗುರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಮಲೆನಾಡ ಗೊಂಬೆ’ ಹಾಡಿನಲ್ಲಿ ನಾಯಕ–ನಾಯಕಿ ಪ್ರೇಮ ಪಯಣದ ಜೊತೆಗೆ ಮಲೆನಾಡಿ ದೃಶ್ಯವೈಭವವಿದೆ. ಗಗನ್ ಬದೇರಿಯ ಸಂಗೀತವಿದ್ದು, ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

‘ಸಿಗಂದೂರು, ಕೋಗಾರಿನ ಕಾಡು ಸೇರಿದಂತೆ ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಬಾರೀ ಮಳೆ, ಕಾಲಿನ ರಕ್ತ ಹೀರುವ ಜಿಗಣಿಗಳ ನಡುವೆ ಈ ಹಾಡಿನ ಚಿತ್ರೀಕರಣ ಒಂದು ಅನನ್ಯ ಅನುಭವವಾಗಿತ್ತು. ಮಾ.15 ರಂದು ಸಿನಿಮಾ ತೆರೆಗೆ ಬರುತ್ತಿದೆ’ ಎಂದರು ಗೌರಿಶಂಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT