ಸಿನಿಮಾ ವಿಮರ್ಶಕರ ಕೂಟದ ಪ್ರಶಸ್ತಿಗೆ ನಾಮನಿರ್ದೇಶನ

ಶುಕ್ರವಾರ, ಏಪ್ರಿಲ್ 19, 2019
22 °C

ಸಿನಿಮಾ ವಿಮರ್ಶಕರ ಕೂಟದ ಪ್ರಶಸ್ತಿಗೆ ನಾಮನಿರ್ದೇಶನ

Published:
Updated:
Prajavani

ಬೆಂಗಳೂರು: ಮುಂಬೈ ಮೂಲದ ಸಿನಿಮಾ ವಿಮರ್ಶಕರ ಕೂಟದ(ಎಫ್‌ಸಿಜಿ) ಪ್ರಶಸ್ತಿಗೆ ಕನ್ನಡದ ‘ನಾತಿಚರಾಮಿ’, ‘ಅಮ್ಮಚ್ಚಿಯೆಂಬ ನೆನಪು’ ಮತ್ತು ‘ಒಂದಲ್ಲಾ ಎರಡಲ್ಲಾ...’ ಸಿನಿಮಾಗಳು ನಾಮನಿರ್ದೇಶನಗೊಂಡಿವೆ.

ಇಂಗ್ಲಿಷ್‌ ಮತ್ತು ಹಿಂದಿ ಸಿನಿಮಾಗಳಿಗೆ ಈ ಕೂಟವು ಪ್ರತಿವರ್ಷ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತದೆ. ಜ್ಯೂರಿಗಳ ತಂಡ ಅಂತಿಮಗೊಳಿಸಿದ ಸಿನಿಮಾಗಳಿಗೆ ಪ್ರಶಸ್ತಿ ನೀಡುವುದು ವಾಡಿಕೆ. ಆದರೆ, ಸಿನಿಮಾ ವಿಮರ್ಶಕರ ತಂಡ ಕನ್ನಡ, ತೆಲುಗು, ತಮಿಳು, ಮಲಯಾಳ, ಮರಾಠಿ, ಪಂಜಾಬಿ ಭಾಷೆಯ ತಲಾ ಮೂರು ಚಿತ್ರಗಳಿಗೆ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು. ಇದೇ 21ರಂದು ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.

ಮಂಸೋರೆ ‘ನಾತಿಚರಾಮಿ’ ಚಿತ್ರ ನಿರ್ದೇಶಿಸಿದ್ದಾರೆ. ‘ಅಮ್ಮಚ್ಚಿಯೆಂಬ ನೆನಪು...’ ಸಿನಿಮಾ ನಿರ್ದೇಶಿಸಿರುವುದು ಚಂ‍ಪಾ ಪಿ. ಶೆಟ್ಟಿ. ಡಿ. ಸತ್ಯಪ್ರಕಾಶ್ ‘ಒಂದಲ್ಲಾ ಎರಡಲ್ಲಾ...’ ಸಿನಿಮಾ ನಿರ್ದೇಶಿಸಿದ್ದಾರೆ. ಈ ಮೂರು ಚಿತ್ರಗಳು ಕಳೆದ ವರ್ಷ ತೆರೆಕಂಡಿದ್ದವು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !