ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಾರ್ ರಿಜಿಸ್ಟ್ರೇಷನ್’ಗೆ ಸಿದ್ಧರಾದ ಪೃಥ್ವಿ, ಮಿಲನಾ

Published 16 ಫೆಬ್ರುವರಿ 2024, 0:34 IST
Last Updated 16 ಫೆಬ್ರುವರಿ 2024, 0:34 IST
ಅಕ್ಷರ ಗಾತ್ರ

ನಟ ಪೃಥ್ವಿ ಅಂಬಾರ್, ಮಿಲನಾ ನಾಗರಾಜ್‌ ಜೋಡಿಯಾಗಿ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಿರ್ದೇಶಕರಾದ ಶಶಾಂಕ್ ಹಾಗೂ ಚೇತನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನವೀನ್ ದ್ವಾರಕಾನಾಥ್ ನಿರ್ದೇಶನದ ಚಿತ್ರ .ಫೆ.23ರಂದು ತೆರೆ ಕಾಣಲಿದೆ. ನಿಶ್ಚಲ್ ಫಿಲ್ಮ್ಸ್‌ ಅಡಿಯಲ್ಲಿ ನವೀನ್ ರಾವ್ ನಿರ್ಮಾಣವಿದೆ. ನಟ ಪೃಥ್ವಿ ಅಂಬಾರ್ ಮಾತನಾಡಿ, ‘ಈ ಸಿನಿಮಾ ಇಬ್ಬರು ಸಹಪಾಠಿಗಳ ಪ್ರಯತ್ನ. ಜಾಗ, ವಾಹನದಿಂದ ಹಲವಕ್ಕೆ ರಿಜಿಸ್ಟ್ರೇಷನ್‌ ಇದೆ. ಮನಸ್ಸಿನಲ್ಲಿ ಸಂಬಂಧಗಳು ರಿಜಿಸ್ಟ್ರೇಷನ್ ಆಗಬೇಕು ಅನ್ನೋದು ನಮ್ಮ ಆಸೆ. ಈ ಸಿನಿಮಾ ಎಲ್ಲರಿಗೂ ಹತ್ತಿರವಾಗುತ್ತದೆ’ ಎಂದರು. 

ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಆರ್.ಕೆ ಹರೀಶ್ ಸಂಗೀತ ಸಂಯೋಜನೆ, ಅಭಿಲಾಷ್ ಕಲಾತಿ–ಅಭಿಷೇಕ್ ಜಿ.ಕಾಸರಗೋಡು ಛಾಯಾಚಿತ್ರಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT