ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ಕಂಗನಾ–ಹೃತಿಕ್ ಸಿನಿಮಾ ಬಿಡುಗಡೆ

Last Updated 22 ಜುಲೈ 2018, 19:30 IST
ಅಕ್ಷರ ಗಾತ್ರ

ಕಂಗನಾ ರನೋಟ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಣಿಕರ್ಣಿಕ– ದ ಕ್ವೀನ್‌ ಆಫ್‌ ಝಾನ್ಸಿ’ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, 2019ರ ಜನವರಿ 25ರಂದು ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಕಂಗನಾ ಝಾನ್ಸಿಯ ರಾಣಿಯಾಗಿ ಅಭಿನಯಿಸಿದ್ದು, ಚಿತ್ರವನ್ನು ಕೃಶ್‌ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕಂಗನಾ ಅಭಿನಯದ ‘ಕಟ್ಟಿ ಬಟ್ಟಿ’, ‘ರಂಗೂನ್‌’, ‘ಸಿಮ್ರಾನ್‌’ ಚಿತ್ರಗಳು ಬಾಕ್ಸ್‌ ಆಫೀಸಿನಲ್ಲಿ ಹಿಟ್‌ ಆಗಿರಲಿಲ್ಲ. ಈಗ ‘ಮಣಿಕರ್ಣಿಕ...’ ಸಿನಿಮಾವು ಕಂಗನಾ ಕೈ ಹಿಡಿಯಲಿದೆಯೇ ಎಂದು ನೋಡಬೇಕಿದೆ.

ಇನ್ನುಕಂಗನಾ ಹಾಗೂ ನಟ ಹೃತಿಕ್‌ ರೋಷನ್‌ ನಡುವಿನ ಮುಸುಕಿನ ಗುದ್ದಾಟ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆಯೇ ‘ಮಣಿಕರ್ಣಿಕ...’ ಸಿನಿಮಾ ಬಿಡುಗಡೆಯ ದಿನವೇ ಹೃತಿಕ್‌ ಅಭಿನಯದ ‘ಸೂಪರ್‌ 30’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೃತಿಕ್‌ ಸಿನಿಮಾ ಬಿಹಾರದ ಗಣಿತಜ್ಞ ಆನಂದ್‌ ಕುಮಾರ್‌ ಜೀವನಕತೆಯನ್ನಾಧರಿಸಿದೆ. ಇಬ್ಬರ ಚಿತ್ರ ಒಂದೇ ದಿನ ಬಿಡುಗಡೆಯಾಗುತ್ತಿರುವುದು ಬಾಲಿವುಡ್‌ನ ಚರ್ಚಾ ವಿಷಯವಾಗಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT