ಸೋಮವಾರ, ಆಗಸ್ಟ್ 26, 2019
27 °C

ಈ ವಾರ ತೆರೆಗೆ ಬರುವ ಕನ್ನಡ ಸಿನಿಮಾಗಳು

Published:
Updated:

ಭಾನು ವೆಡ್ಸ್ ಭೂಮಿ

ಕಿಶೋರ್ ಶೆಟ್ಟಿ ನಿರ್ಮಾಣದ ಈ ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ, ಎ.ಎಂ. ನೀಲ್ ಸಂಗೀತ ಚಿತ್ರಕ್ಕಿದೆ. ಸೂರ್ಯಪ್ರಭ್, ರಕ್ಷತಾ ಮಲ್ನಾಡ್, ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಎಚ್.ಎಂ.ಟಿ. ವಿಜಿ, ರಂಗಾಯಣ ರಘು ತಾರಾಗಣದಲ್ಲಿ ಇದ್ದಾರೆ. ನೈಜ ಘಟನೆಯನ್ನು ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದೆ ಎಂದು ಚಿತ್ರತಂಡ ಹೇಳಿದೆ.

ಬೆಕ್ಕಿಗೊಂದು ಮೂಗುತಿ

ಜಿ.ಕೆ. ಮಾಧುರಿ ಉಮೇಶ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶನ ಆಸ್ಲಿ ಚಾಕೋ ಅವರದ್ದು. ರುದ್ರಮುನಿ ಛಾಯಾಗ್ರಹಣ, ವಿಶಾಖ್ ವಸಿಷ್ಠ ಸಂಗೀತ ಚಿತ್ರಕ್ಕಿದೆ. ಸುಷ್ಮಾ, ರಮೇಶ್ ಭಟ್, ಬೆಂಗಳೂರು ನಾಗೇಶ್, ಮುನಿ, ವಿವಿನ್, ಉಮೇಶ್ ತಾರಾಗಣದಲ್ಲಿ ಇದ್ದಾರೆ. ಬೆಂಗಳೂರು, ತುಮಕೂರು, ದೇವರಾಯನದುರ್ಗ, ಕನಕಪುರ, ಮೇಕೆದಾಟು ಕಡೆ ಚಿತ್ರೀಕರಣ ನಡೆದಿದೆ.

ವಜ್ರಮುಖಿ

ಇದರ ಕಥೆ, ಚಿತ್ರಕಥೆ, ನಿರ್ಮಾಣ ಶಶಿಕುಮಾರ್ ಅವರದ್ದು. ಇದರ ನಿರ್ದೇಶನ ಆದಿತ್ಯ ಕುಣಿಗಲ್ ಅವರದ್ದು. ಪಿ.ಕೆ.ಎಚ್. ದಾಸ್ ಛಾಯಾಗ್ರಹಣ, ರಾಜ್‍ ಭಾಸ್ಕರ್ ಸಂಗೀತ ಚಿತ್ರಕ್ಕಿದೆ. ಹಾಡುಗಳನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ನೀತು, ದಿಲೀಪ್ ಪೈ, ಸಂಜನಾ, ಶೋಭಿತಾ, ಪ್ರಕಾಶ್ ಹೆಗ್ಗೋಡು, ರವಿಕಿರಣ್, ನೇಹಾ, ರಾಘವೇಂದ್ರ ರೈ ತಾರಾಗಣದಲ್ಲಿ ಇದ್ದಾರೆ.

Post Comments (+)