ಶುಕ್ರವಾರ, ಅಕ್ಟೋಬರ್ 22, 2021
25 °C

ನಿರ್ದೇಶಕ ವಿಕ್ರಂ ಭಟ್‌, ಶ್ವೇತಾಂಬರಿ ಸೋನಿ ಪರಿಣಯದ ಗುಟ್ಟು ರಟ್ಟು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಿರ್ದೇಶಕ ವಿಕ್ರಂ ಭಟ್‌ ಅವರು ಶ್ವೇತಾಂಬರಿ ಸೋನಿ ಅವರನ್ನು ಮದುವೆಯಾಗಿರುವುದು ಇದೀಗ ಬಹಿರಂಗವಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ ಎಂದು ಬಾಲಿವುಡ್‌ ನಿರ್ಮಾಪಕ ಮಹೇಶ್‌ ಭಟ್‌ ಗುಟ್ಟು ರಟ್ಟು ಮಾಡಿದ್ದಾರೆ. 

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿಕ್ರಂ ಭಟ್‌ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ’ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ವಿಕ್ರಂ ಭಟ್‌ ನನಗೆ ಫೋನ್‌ ಮಾಡಿ ಮದುವೆಯಾಗುತ್ತಿರುವ ವಿಚಾರವನ್ನು ಹೇಳಿದ್ದ. ಕೋವಿಡ್‌ ಕಾರಣ ತುಂಬಾ ಸರಳವಾಗಿ ಮದುವೆಯಾಗುವುದಾಗಿ ತಿಳಿಸಿದ್ದ. ನನ್ನನ್ನು ಕೂಡ ವಿವಾಹಕ್ಕೆ ಆಮಂತ್ರಿಸಿದ್ದ’ ಎಂದು ಮಹೇಶ್ ಭಟ್‌ ಹೇಳಿದ್ದಾರೆ. 

’ಮದುವೆ ರಹಸ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ? ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದು ಇಡೀ ಪ್ರಪಂಚ ನನ್ನ ನೋಡಿಲ್ಲ ಎಂದು ಯೋಚಿಸಿದಂತಾಗಿದೆ ನಿನ್ನ ಕತೆ. ಮೊದಲು ಮದುವೆ ವಿಷಯವನ್ನು ಬಹಿರಂಗಪಡಿಸು ಎಂದು ಅವನಿಗೆ ಹೇಳಿದ್ದ’ ಎಂದು ಮಹೇಶ್‌ ಭಟ್‌ ತಿಳಿಸಿದ್ದಾರೆ.

ಇತ್ತ ಶ್ವೆತಾಂಬರಿ ಕೂಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಕ್ರಂ ಭಟ್‌ ಅವರೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಧುಮಗಳಾಗಿ ಸಿಂಗಾರಗೊಂಡಿರುವ ಚಿತ್ರಗಳನ್ನು ಅವರು ಕಳೆದ ವರ್ಷ ಪೋಸ್ಟ್‌ ಮಾಡಿದ್ದರು.

ಶ್ವೇತಾಂಬರಿ ಸೋನಿ ಅವರು ಪ್ರಸಾಧನ ಕಲಾವಿದೆ ನಮ್ರತಾ ಸೋನಿ ಅವರು ತಂಗಿಯಾಗಿದ್ದಾರೆ. ನಮ್ರತಾ ಅವರು ವಿಕ್ರಂ ಭಟ್‌ ಸಿನಿಮಾಗಳಲ್ಲಿ ಪ್ರಸಾಧನ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು