ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಯ ಹಿಂದಿನ ಶ್ರಮ ಹೇಳುವ ‘ಫಸ್ಟ್ ಡೇ ಫಸ್ಟ್ ಶೋ’

Last Updated 15 ಜನವರಿ 2023, 10:50 IST
ಅಕ್ಷರ ಗಾತ್ರ

ಕಥೆಯ ಹಿಂದಿನ ಶ್ರಮ ಹೇಳುವ ಚಿತ್ರವೇ ‘ಫಸ್ಟ್ ಡೇ ಫಸ್ಟ್ ಶೋ’. ‘ಒಂದ್ ಕಥೆ ಹೇಳ್ಲಾ’, ‘ವಾವ್’, ‘ಶಾಲಿವಾಹನ ಶಕೆ’ ಸಿನಿಮಾ ಮೂಲಕ ನಟ ಕಂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಗಿರೀಶ್.ಜಿ ನಿರ್ದೇಶನದ ಚಿತ್ರವಿದು. ಕಮರ್ಶಿಯಲ್ ಥ್ರಿಲ್ಲರ್ ಜಾನರ್ ಒಳಗೊಂಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ ಗಿರೀಶ್‌ ಜಿ.

ಚಿತ್ರದ ಶೀರ್ಷಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್‌, ಸುಂದರ್ ರಾಜ್ ಹಾಗೂ ಭಾ.ಮ.ಗಿರೀಶ್ ಅನಾವರಣ ಮಾಡಿದರು.

‘ಶುಕ್ರವಾರ ‘ಫಸ್ಟ್ ಡೇ ಫಸ್ಟ್ ಶೋ’ ತೆರೆ ಕಾಣುವ ಒಂದು ಸಿನಿಮಾದ ಹಿಂದೆ ಎಷ್ಟೆಲ್ಲ ಘಟನೆಗಳು ನಡೆದಿರುತ್ತದೆ ಅನ್ನುವುದನ್ನು ಒಂದು ಭಾವನಾತ್ಮಕ ಪಯಣದ ಜೊತೆ ಕಟ್ಟಿಕೊಡಲಾಗಿದೆ. ಶೇಕಡಾ 70ರಷ್ಟು ಚಿತ್ರೀಕರಣ ಮುಗಿದಿದೆ’ ಎಂದಿದ್ದಾರೆ ಗಿರೀಶ್‌.

ರೋಹಿತ್ ಶ್ರೀನಾಥ್ ಮತ್ತೆ ಬಣ್ಣದ ಲೋಕಕ್ಕೆ ಈ ಚಿತ್ರದ ಮೂಲಕ ಬಂದಿದ್ದಾರೆ. ಅನಿರುದ್ಧ್ ಶಾಸ್ತ್ರಿ, ಬಿ.ಎಂ. ವೆಂಕಟೇಶ್, ಹರೀಶ್ ಅರಸು ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಬೆಂಗಳೂರು, ಚೆನ್ನೈನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾನಿಕ ಮೂವೀಸ್ ಬ್ಯಾನರ್ ನಡಿ ಊರ್ಮಿಳಾ ಕಿರಣ್ ಚಿತ್ರ ನಿರ್ಮಿಸಿದ್ದಾರೆ. ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಸಂಗೀತ ನಿರ್ದೇಶನ, ರಾಕೇಶ್ ಸಿ. ತಿಲಕ್ ಮತ್ತು ಅರುಣ್ ಕುಮಾರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT