ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓ ಮೈ ಲವ್‌’ ಫಸ್ಟ್ ಲುಕ್‌ ಬಿಡುಗಡೆ

Last Updated 12 ಜನವರಿ 2021, 10:10 IST
ಅಕ್ಷರ ಗಾತ್ರ

ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಮತ್ತು ಕೀರ್ತಿ ಕಲಕೇರಿ ನಟನೆಯ ಅದ್ಧೂರಿ ಚಿತ್ರ ‘ಓ ಮೈ ಲವ್‌’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಮಂತ್ರಾಲಯದ ಗುರುಗಳು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಚಿತ್ರತಂಡವನ್ನು ಹರಸಿದ್ದಾರೆ.

‘ತೂಫಾನ್’, ‘ಬಳ್ಳಾರಿ ದರ್ಬಾರ್’, ‘18 ಟು 25’ ಚಿತ್ರಗಳನ್ನು ನಿರ್ದೇಶಿಸಿರುವ ಸ್ಮೈಲ್ ಶ್ರೀನು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯೂ ಇವರದೇ.

ಬಿ. ರಾಮಾಂಜಿನಿ ಈ ಚಿತ್ರದ ಕಥೆ ಬರೆಯುವ ಜತೆಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರೀತಿ ಮತ್ತು ಕೌಟುಂಬಿಕ ಕಥಾಹಂದರದ ಈ ಚಿತ್ರದಲ್ಲಿ ಹದಿಹರೆಯದ ಪ್ರೀತಿ-ಪ್ರೇಮ, ವೈ ಫೈ ಯುಗದಲ್ಲಿ ಕಣ್ಮರೆಯಾಗುತ್ತಿರುವ ಭಾವನಾತ್ಮಕ ಸಂಬಂಧಗಳನ್ನು ಸಾಮಾನ್ಯ ಜಾಡನ್ನು ಬಿಟ್ಟು, ವಿಭಿನ್ನ ಜಾಡಿನಲ್ಲಿ ನಿರೂಪಣೆ ಮಾಡಲಿದ್ದಾರಂತೆ ಸ್ಮೈಲ್‍ ಶ್ರೀನು.

ಸಂಕ್ರಾಂತಿ ಹಬ್ಬದಂದು ಚಿತ್ರ ಸೆಟ್ಟೇರಲಿದೆ.ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ 20 ದಿನಗಳ ಕಾಲ ಚಿತ್ರದ ನಡೆಯಲಿದೆ. ‘ಮಗಧೀರ’ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದ ದೇವಗಿಲ್ ಈ ಚಿತ್ರದಲ್ಲೂ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ವಿ. ನಾಗೇಂದ್ರಪ್ರಸಾದ್ 6 ಹಾಡುಗಳಿಗೆ ಸಾಹಿತ್ಯ ರಚಿಸುತ್ತಿದ್ದು, ಚರಣ್ ಅರ್ಜುನ್ ಸಂಗೀತ ಸಂಯೋಜಿಸಲಿದ್ದಾರೆ. ನೃತ್ಯ ಸಂಯೋಜಕ ಮುರುಳಿ ಅವರ ನೃತ್ಯ ಸಂಯೋಜನೆ, ಇಸ್ಮಾರ್ಟ್ ಶಂಕರ್ ಮತ್ತು ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT