ಪರಶುರಾಮ್ ಪೆತ್ಲ ನಿರ್ದೇಶನದ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಟಿ ಕೀರ್ತಿ ಸುರೇಶ್ ಅಭಿನಯದ ‘ಸರ್ಕಾರು ವಾರಿ ಪಾಟಾ’ ಚಿತ್ರದ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಕೊರೊನಾ ಕಾರಣದಿಂದಾಗಿ ಚಿತ್ರೀಕರಣ ದೀರ್ಘಕಾಲ ಮುಂದೂಡಲ್ಪಟ್ಟಿತ್ತು.

ಮೊದಲ ಹಂತದ ಶೂಟಿಂಗ್ ದುಬೈನಲ್ಲಿ ಇತ್ತೀಚೆಗೆ ಮುಗಿದಿದೆ. ಚಿತ್ರದ ಒಂದು ಸ್ಟಿಲ್ನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಮಹೇಶ್ ಬಾಬು ಅಭಿಮಾನಿಗಳುಖುಷಿಯಾಗಿದ್ದಾರೆ.

ಶಾರ್ಜಾದ ಮೆಲಿಯಾದಲ್ಲಿ ಸುಂದರ ಐತಿಹಾಸಿಕ ತಾಣಗಳ ಹಿನ್ನೆಲೆಯಲ್ಲಿ ಮಹೇಶ್ ಬಾಬು ಅಭಿನಯದ ದೃಶ್ಯವನ್ನು ಚಿತ್ರಿಸಲಾಗಿದೆ. ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ. ಜಿಎಂಬಿ ಎಂಟರ್‌ಟೈನ್‌ಮೆಂಟ್ಸ್ ಮತ್ತು 14 ರೀಲ್ಸ್ ಪ್ಲಸ್ ಸಂಸ್ಥೆಗಳು ಜಂಟಿಯಾಘಿ ಈ ಚಿತ್ರ ನಿರ್ಮಿಸುತ್ತಿವೆ. ವೆನ್ನಿಲ್ಲಾ ಕಿಶೋರ್ ಮತ್ತು ಸುಬ್ಬರಾಜು ಅವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್.ಎಸ್. ತಮನ್ ಅವರ ಸಂಗೀತವಿದೆ. ಮಾಧಿ ಅವರು ಚಿತ್ರದ ಛಾಯಾಗ್ರಾಹಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.