ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ್‌ ಜನ್ಮದಿನ: ಗಾಳಿಪಟ–2 ಚಿತ್ರದ ‘ನಾನಾಡದ ಮಾತೆಲ್ಲವಾ ಕದ್ದಾಲಿಸು‘ ಹಾಡು ಕೇಳಿ

Last Updated 2 ಜುಲೈ 2022, 6:33 IST
ಅಕ್ಷರ ಗಾತ್ರ

ಬೆಂಗಳೂರು:‘ಚೆಲ್ಲಾಟ’ವಾಡುತ್ತಾಚಂದನವನಕ್ಕೆಕಾಲಿರಿಸಿ ‘ಮುಂಗಾರು ಮಳೆ’ಯಲ್ಲಿ ನೆನೆದು ಇಡೀ ಕರ್ನಾಟಕಕ್ಕೇ ಪ್ರೀತಿಯ ಜ್ವರ ತರಿಸಿದ್ದ ಗೋಲ್ಡರ್‌ಸ್ಟಾರ್‌ ಗಣೇಶ್‌ ಅವರಿಗೆ ಇಂದು(ಜುಲೈ 2) ಜನ್ಮದಿನದ ಸಂಭ್ರಮ.

ಗಣೇಶ್‌ ಅವರು 42ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳುಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ಹೇಳುತ್ತಿದ್ದಾರೆ.

ನಿರ್ದೇಶಕಯೋಗರಾಜಭಟ್ಅವರು ಗಣಪನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಗಣೇಶ್‌ ನಟಿಸಿರುವ ಹೊಸಸಿನಿಮಾಗಾಳಿಪಟ–2 ಬಿಡುಗಡೆಗೆಸಿದ್ದವಾಗಿದೆ.ಅವರಜನ್ಮದಿನಕ್ಕೆಚಿತ್ರತಂಡ ‘ನಾನಾಡದಮಾತೆಲ್ಲವಾಕದ್ದಾಲಿಸು‘ ಎಂಬ ರೊಮ್ಯಾಂಟಿಕ್‌ ಹಾಡನ್ನು ಬಿಡುಗಡೆ ಮಾಡಿದೆ.

ಈ ಚಿತ್ರದ ಹಾಡುರೊಮ್ಯಾಂಟಿಕ್ಆಗಿದ್ದು ಗಣೇಶ್‌ ಅಭಿಮಾನಿಗಳಿಗೆ,ಸಿನಿಮಾಪ್ರಿಯರಿಗೆಇಷ್ಟವಾಗಿದೆ. ಹಾಡು ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀಕ್ಷಣೆ ಕಂಡಿದೆ.

ಜಯಂತ್‌ಕಾಯ್ಕಿಣಿಅವರ ಸಾಹಿತ್ಯಕ್ಕೆಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.ಸೋನುನಿಗಮ್‌ ಅವರ ದನಿಯಲ್ಲಿ ಹಾಡು ಇಂಪಾಗಿದೆ.

ಚಿತ್ರದನಾಯಕಿಯರಾಗಿವೈಭವಿ, ಸಂಯುಕ್ತಮೆನನ್,ಶರ್ಮಿಳಾಮಾಂಡ್ರೆಕಾಣಿಸಿಕೊಂಡಿದ್ದಾರೆ.ರಮೇಶ್ರೆಡ್ಡಿಅವರು ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಚಿತ್ರ ಆಗಸ್ಟ್‌ 12ಕ್ಕೆ ಬಿಡುಗಡೆಯಾಗಲಿದೆ.

ನಿರ್ದೇಶಕಯೋಗರಾಜಭಟ್ಅವರು 2008ರಲ್ಲಿ ಕೊಟ್ಟಹಿಟ್ಚಿತ್ರ ‘ಗಾಳಿಪಟ’.ಗಣೇಶ್,ದಿಗಂತ್,ರಾಜೇಶ್ಕೃಷ್ಣನ್, ಅನಂತನಾಗ್ಅವರ ತಾರಾಗಣ ಇದ್ದ ಈ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಇದೀಗ ಭಟ್ಟರು ಎರಡನೆಯ ಬಾರಿಗೆ ಗಾಳಿಪಟ ಹಾರಿಸಲು ದಾರ ಹಿಡಿದು ನಿಂತಿದ್ದಾರೆ.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT