ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪಸ್ವಿನಿ ಮೆಚ್ಚಿದ ‘ಗಜರಾಮ’

Published 25 ಜನವರಿ 2024, 22:33 IST
Last Updated 25 ಜನವರಿ 2024, 22:33 IST
ಅಕ್ಷರ ಗಾತ್ರ

ರಿಷಬ್‌ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ವಿರಾಜಪೇಟೆ ಮೂಲದ ತಪಸ್ವಿನಿ ಪೂಣಚ್ಚ ಸದ್ಯ ತಮ್ಮ ಎರಡನೇ ಸಿನಿಮಾ ‘ಗಜರಾಮ’ನ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. 

ಸುನಿಲ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದ ಟೀಸರ್‌ ಇತ್ತೀಚೆಗೆ ತೆರೆಕಂಡಿದೆ. ‘ಬಿಚ್ಚುಗತ್ತಿ’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಮ್ಯಾಸಿವ್ ಸ್ಟಾರ್ ರಾಜವರ್ಧನ್ ನಾಯಕನಾಗಿ ಇಲ್ಲಿ ನಟಿಸಿದ್ದು, ಅವರಿಗೆ ತಪಸ್ವಿನಿ ಜೋಡಿಯಾಗಿದ್ದಾರೆ. ‘ಸಿನಿಮಾದಲ್ಲಿ ಒಳ್ಳೆಯ ಕಂಟೆಂಟ್‌ ಇದೆ. ಎಲ್ಲ ಕಮರ್ಷಿಯಲ್‌ ಅಂಶಗಳನ್ನು ಸಿನಿಮಾ ಹೊಂದಿದ್ದು, ನನ್ನನ್ನು ನಾನು ತೆರೆಯ ಮೇಲೆ ನೋಡಿ ಖುಷಿಪಟ್ಟಿದ್ದೇನೆ’ ಎಂದರು ರಾಜವರ್ಧನ್‌. 

‘ಸಿನಿಮಾದಲ್ಲಿ ಆ್ಯಕ್ಷನ್, ಸೆಂಟಿಮೆಂಟ್, ಲವ್ ಎಲ್ಲವೂ ಇದೆ. ಮೂರು ಶೇಡ್‌ಗಳಲ್ಲಿ ನಾಯಕ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಒಂದು ಪೈಲ್ವಾನ್ ಪಾತ್ರ. ಹೀಗಾಗಿ ಚಿತ್ರದ ಸಂಗೀತ ಮತ್ತು ಹಾಡುಗಳನ್ನು ಭಿನ್ನವಾಗಿ ಮಾಡಿದ್ದೇವೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಮನೋಮೂರ್ತಿ. 

‘ನನ್ನ ಎರಡನೇ ಸಿನಿಮಾವಿದು. ಚಿತ್ರರಂಗಕ್ಕೆ ನಾನು ಹೊಸಬಳು. ರಿಷಬ್‌ ಅವರ ಜೊತೆ ತೆರೆಹಂಚಿಕೊಂಡು ಈ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ನಾನು ಲಕ್ಕಿ. ‘ಗಜರಾಮ’ ಸಿನಿಮಾದ ಕಥೆ ಪ್ರೇಕ್ಷಕರನ್ನು ಸೆಳೆಯುವಂತಿದೆ’ ಎಂದು ಅನುಭವ ಹಂಚಿಕೊಂಡರು ತಪಸ್ವಿನಿ. ಆ್ಯಕ್ಷನ್ ಅಂಶಗಳಿಂದ ಕೂಡಿರುವ ಟೀಸರ್‌ನಲ್ಲಿ ಪ್ರೇಮಕಥೆಯನ್ನು ಅನಾವರಣ ಮಾಡಲಾಗಿದೆ. ಭರ್ಜರಿ ಆ್ಯಕ್ಷನ್ಸ್ ಮೂಲಕ ರಾಜವರ್ಧನ್ ರಗಡ್ ಲುಕ್‌ನಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್‌ ನಟಿಸಿದ್ದಾರೆ. ಕಬೀರ್ ಸಿಂಗ್ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ. ನಿರ್ದೇಶಕ ಸುನಿಲ್ ಕುಮಾರ್‌ಗೆ ಇದು ಚೊಚ್ಚಲ ಸಿನಿಮಾ. ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಚಿತ್ರಗ್ರಾಹಣವಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದೆ. ‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT