‘ಚಮಕ್’, ‘ಸಖತ್’ ಚಿತ್ರಗಳ ನಂತರ ಮತ್ತೊಂದು ಚಿತ್ರಕ್ಕೆ ‘ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಜೋಡಿ ಮತ್ತೊಂದು ಚಿತ್ರಕ್ಕೆ ರೆಡಿಯಾಗಿದೆ.

ಈ ಬಾರಿ ಡಾರ್ಕ್ ಹ್ಯೂಮರಸ್ ಕಥೆ ಇಟ್ಟುಕೊಂಡು ಆ್ಯಕ್ಷನ್ ಕಟ್ ಹೇಳಲು ಹೊರಟಿರುವ ಸುನಿ, ಗಣೇಶ್ ಜತೆಗೆ ‘ಹ್ಯಾಟ್ರಿಕ್’ ಯಶಸ್ಸು ಕಾಣಬೇಕೆನ್ನುವ ಗುರಿ ಹೊಂದಿದ್ದಾರೆ. ಗಣಿ ಮತ್ತು ಸುನಿ ಕಾಂಬಿನೇಷನ್ನಲ್ಲಿ ಈ ಬಾರಿ ತೆರೆ ಮೇಲೆ ಬರುವುದು ‘ದಿ ಸ್ಟೋರಿ ಆಫ್ ರಾಯಗಡ’.

ಇವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಮೊದಲ ಚಿತ್ರ ‘ಚಮಕ್’ ಸಖತ್ ಹಿಟ್ ಆಗಿತ್ತು. ‘ಸಖತ್‘ ಎನ್ನುವ ಟೈಟಲ್ ಇಟ್ಟುಕೊಂಡೇ ಈ ಜೋಡಿ ಮತ್ತೊಂದು ತಿಳಿ ಹಾಸ್ಯ ಮತ್ತು ಆ್ಯಕ್ಷನ್ ಇರುವ ಚಿತ್ರವನ್ನು ಮಾಡುತ್ತಿದೆ. ಕೊರೊನಾ ಲಾಕ್ಡೌನ್ ಕಾರಣಕ್ಕೆ ಚಿತ್ರದ ಕೆಲಸಗಳು ಸ್ಥಗಿತಗೊಂಡಿದ್ದವು. ಶರಣ್ ನಾಯಕನಾಗಿರುವ ‘ಅವತಾರ್ ಪುರುಷ’ ಚಿತ್ರಕ್ಕೂ ಸುನಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ‘ಸಖತ್’ ಚಿತ್ರದ ಚಿತ್ರೀಕರಣ 25 ದಿನಗಳ ಕಾಲ ನಡೆದಿದೆ. ಇನ್ನು 40 ದಿನಗಳ ಚಿತ್ರೀಕರಣ ಬಾಕಿಯಿದೆ. ಈ ಎರಡು ಚಿತ್ರಗಳು ಪೂರ್ಣಗೊಂಡ ನಂತರ ಸುನಿ‘ದಿ ಸ್ಟೋರಿ ಆಫ್ ರಾಯಗಡ’ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.

ಜುಲೈ 2ರಂದು‘ಗೋಲ್ಡನ್ ಸ್ಟಾರ್’ ಗಣಿಯ ಹುಟ್ಟುಹಬ್ಬ. ಕೊರೊನಾ ಆತಂಕ ಎಲ್ಲೆಡೆ ಮನೆಮಾಡಿರುವುದರಿಂದ ಗಣಿ ಈ ಬಾರಿ ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಿಲ್ಲ. ಆದರೆ,‘ದಿ ಸ್ಟೋರಿ ಆಫ್ ರಾಯಗಡ’ ಚಿತ್ರತಂಡ ಗಣಿ ಹುಟ್ಟುಹಬ್ಬದಂದು ಈ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಲು ನಿರ್ಧರಿಸಿದೆ ಎನ್ನುತ್ತಾರೆ ನಿರ್ದೇಶ ಸಿಂಪಲ್ ಸುನಿ.

‘ದಿ ಸ್ಟೋರಿ ಆಫ್ ರಾಯಗಡ’ದ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲವೂ ಈಗ ಚಂದನವನದಲ್ಲಿ ಮನೆ ಮಾಡಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಸುನಿ ‘ಸದ್ಯಕ್ಕೆ ಈ ಚಿತ್ರದ ಕಾಗದದ ಕೆಲಸದಲ್ಲಿದೆ. ಮೊದಲ ಪೋಸ್ಟರ್ ಕೂಡ ಹಂಚಿಕೊಂಡಿದ್ದೇವೆ. ಈ ಚಿತ್ರದ ಕಥೆ ನನ್ನದೇ. ಕಥೆ ಮತ್ತು ಪಾತ್ರಕ್ಕೆ ಸೂಕ್ತವಾಗುವ ನಾಯಕಿಯ ಆಯ್ಕೆ ಮುಂದಿನ ದಿನಗಳಲ್ಲಿ ನಡೆಯಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.