ಇದಕ್ಕಾಗಿ ಹತ್ತಾರು ಆ್ಯಪ್‌ಗಳು, ಎಐ ತಂತ್ರಜ್ಞಾನ ಹಾಗೂ ಕೆಲವು ಕಂಪ್ಯೂಟರ್ಗಳನ್ನು ಬಳಸಿ ಈ ಟ್ರೈಲರ್ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ. ತಾವು ಬಳಸಿರುವ ಅಪ್ಲಿಕೇಶನ್‌ಗಳ ಮಾಹಿತಿಯನ್ನು ಟ್ವೀಟ್ ಮೂಲಕ ನೀಡಿದ್ದಾರೆ.
ನಿಕೊಲಸ್ ನ್ಯೂಬರ್ಟ್ ಮುಖ್ಯವಾಗಿ ಮಿಡ್ಜರ್ನಿ ಹಾಗೂ ರನ್ವೇ ಎಂಬ ಎಐ ಟೂಲ್ಗಳನ್ನು ಬಳಕೆ ಮಾಡಿದ್ದಾರೆ. ಜೊತೆಗೆ ಕ್ಯಾಪ್ಕಟ್ ಅಪ್ಲಿಕೇಶನ್ ಬಳಸಿ ಎಡಿಟ್ ಮಾಡಿದ್ದಾರೆ. ಹಾಗೂ ಹಿನ್ನೆಲೆ ಸಂಗೀತಕ್ಕೆ ಪಿಕ್ಸಾಬೇ ಹಾಗೂ ಸ್ಟ್ರಿಂಗ್ ಬೆಲ್ ಅಪ್ಲಿಕೇಶನ್ಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಮೂಲಕ ಸೃಜಿಸಿರುವ ಈ ಟ್ರೈಲರ್ ‘ಸ್ಟಾರ್ ವಾರ್ಸ್’, ‘ಅವೇಂಜರ್ಸ್’ ಸಿನಿಮಾಗಳನ್ನು ನೆನಪಿಸುವ ರೀತಿಯಲ್ಲಿದೆ.