ಗುರುವಾರ , ಫೆಬ್ರವರಿ 25, 2021
28 °C

ಆರ್ಥಿಕ ತಜ್ಞೆ ಸೌಂದರ್ಯ ಹೊಗಳಿ ಪೇಚಿಗೆ ಸಿಲುಕಿದ ಅಮಿತಾಬ್ ಬಚ್ಚನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: "ಅವಳ ಮುಖವು ತುಂಬಾ ಸುಂದರವಾಗಿದೆ, ಯಾರೂ ಅವಳನ್ನು ಆರ್ಥಿಕತೆಗೆ ಸಂಬಂಧಿಸಿದವಳು ಎನ್ನುವುದಿಲ್ಲ" ಎಂದು ಐಎಂಎಫ್ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಬಗ್ಗೆ ಜನಪ್ರಿಯ ಕ್ವಿಜ್ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ಕಾಮೆಂಟ್ ಮಾಡುವ ಮೂಲಕ ಅಮಿತಾಬ್ ಬಚ್ಚನ್ ಪೇಚಿಗೆ ಸಿಲುಕಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆ, ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು, ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ  "ವಿಶೇಷ" ವಿಡಿಯೋವನ್ನು ಟ್ವೀಟ್ ಮಾಡಿದ್ದು, ತಮ್ಮ ಬಗೆಗಿನ ಕಾಮೆಂಟ್ ಬಗ್ಗೆ ಪ್ರಶ್ನಿಸಿದ್ದಾರೆ.

ಈ ವಿಡಿಯೋದಲ್ಲಿ ಅಮಿತಾಬ್ ಬಚ್ಚನ್ ಪರದೆ ಮೇಲೆ ಗೀತಾ ಗೋಪಿನಾಥ್ ಅವರ ಚಿತ್ರ ಪ್ರದರ್ಶಿಸಿ, ‘ಈ ಚಿತ್ರದಲ್ಲಿ ಕಾಣುವ ಅರ್ಥಶಾಸ್ತ್ರಜ್ಞರು 2019 ರಿಂದ ಯಾವ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದಾರೆ" ಎಂದು ಸ್ಪರ್ಧಿಗೆ ಪ್ರಶ್ನೆ ಕೇಳುತ್ತಾರೆ. .

"ಅವಳ ಮುಖವು ತುಂಬಾ ಸುಂದರವಾಗಿದೆ, ಯಾರೂ ಅವಳನ್ನು ಆರ್ಥಿಕತೆಗೆ ಸಂಬಂಧಿಸಿದವಳು ಎನ್ನುವುದಿಲ್ಲ" ಎಂದು ಹೇಳುತ್ತಾರೆ. 

ಇದೇ ವಿಡಿಯೋ ಟ್ವೀಟ್ ಮಾಡಿರುವ ಗೀತಾ ಗೋಪಿನಾಥ್ ಅವರು, ಸಾರ್ವಕಾಲಿಕ ಶ್ರೇಷ್ಠ ನಟ ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾದ ನಾನು ಇದನ್ನು ಅವರಿಂದ ಎಂದೂ ನಿರೀಕ್ಷಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಗೀತಾ ಗೋಪಿನಾಥ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, ಧನ್ಯವಾದ ಗೀತಾ ಅವರೆ, ಕಾರ್ಯಕ್ರಮದಲ್ಲಿ ನಾನು ಬಳಸಿದ ಒಂದೊಂದು ಪದವೂ ಅತ್ಯಂತ ವಿನಯದಿಂದ ಕೂಡಿತ್ತು ಎಂದು ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಮಿತಾಬ್ ತಪ್ಪೇನೂ ಹೇಳಿಲ್ಲ ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಸುಂದರವಾದ ಆರ್ಥಿಕ ಪರಿಣಿತರು ಇರುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು