ಶುಕ್ರವಾರ, ಸೆಪ್ಟೆಂಬರ್ 25, 2020
23 °C

‘ಗುಡ್‌ ಲಕ್ ಸಖಿ’ ಟೀಸರ್ ನಾಳೆ ಬಿಡುಗಡೆ: ಹಳ್ಳಿಹುಡುಗಿ ಪಾತ್ರದಲ್ಲಿ ಕೀರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಟನೆಯ ಮುಂದಿನ ಚಿತ್ರ ‘ಗುಡ್‌ ಲಕ್ ಸಖಿ’. ನಾಳೆ (ಆಗಸ್ಟ್ 15) ಈ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.

ಚಿತ್ರದ ಪೋಸ್ಟರ್‌ನಲ್ಲಿ ಕೀರ್ತಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ದಿರಿಸಿನಲ್ಲಿ ಖುಷಿಯಿಂದ ನರ್ತಿಸುತ್ತಿರುವ ಕೀರ್ತಿಯ ಚಿತ್ರ ಪೋಸ್ಟರ್‌ನಲ್ಲಿದೆ.

ಸರಳ ಉಡುಗೆಯಲ್ಲಿ ಕೀರ್ತಿಯ ಸುಂದರ ನೋಟ ಅನಾವರಣಗೊಂಡಿದೆ. ಅಲ್ಲದೇ ಈ ಪಾತ್ರಕ್ಕೆ ಅವರು ಯಾವುದೇ ರೀತಿಯ ಮೇಕಪ್ ಮಾಡದೇ ಇರುವುದು ವಿಶೇಷ.

ಕ್ರೀಡಾ ಹಿನ್ನೆಲೆ ಇರುವ ಈ ಚಿತ್ರಕ್ಕೆ ನಾಗೇಶ್ ಕುಕುನೂರ್ ನಿರ್ದೇಶನವಿದೆ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಕೀರ್ತಿ ಸುರೇಶ್ ಶೂಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದಿ ಪಿನಿಸೆಟ್ಟಿ, ಜಗಪತಿ ಬಾಬು ಮುಖ್ಯಭೂಮಿಕೆಯಲ್ಲಿದ್ದಾರೆ.

ಈ ಚಿತ್ರವು ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಸಣ್ಣಪುಟ್ಟ ಕೆಲಸಗಳನ್ನು ಹೊರತುಪಡಿಸಿದರೆ ಬಹುತೇಕ ಚಿತ್ರೀಕರಣ ಮುಗಿದಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು