ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಶಿಷ್ಯರು, ಮಾನ್ಸೂನ್ ರಾಗ ಸಿನಿಮಾಗಳು ಒಟಿಟಿಗೆ

Last Updated 5 ನವೆಂಬರ್ 2022, 12:44 IST
ಅಕ್ಷರ ಗಾತ್ರ

ಬೆಂಗಳೂರು: ನಟ ಡಾಲಿ ಧನಂಜಯ್‌, ರಚಿತಾ ರಾಮ್‌ ನಟನೆಯ ‘ಮಾನ್ಸೂನ್‌ ರಾಗ’ ಹಾಗೂ ಶರಣ್ ಮುಖ್ಯಪಾತ್ರದಲ್ಲಿರುವ ‘ಗುರು ಶಿಷ್ಯರು’ ಸಿನಿಮಾಗಳು ಒಟಿಟಿ ವೇದಿಕೆಗೆ ಬರಲು ಸಜ್ಜಾಗಿವೆ.

ಈ ಎರಡೂ ಚಿತ್ರಗಳು ‘ಜೀ5’ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿವೆ. ಈ ಬಗ್ಗೆ ಜೀ5 ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದೆ.

ಗುರು ಶಿಷ್ಯರು ನವೆಂಬರ್ 11 ರಂದು ಜಿ5ಗೆ ಬರಲಿದೆ. ಮಾನ್ಸೂನ್ ರಾಗ ನವೆಂಬರ್ 25ಕ್ಕೆ ಪ್ರಸಾರವಾಗಲಿದೆ.

ಮಾನ್ಸೂನ್‌ ರಾಗ ಸಿನಿಮಾ ಮೂಲಕ ಧನಂಜಯ್‌ ಮತ್ತು ರಚಿತಾ ಮೊದಲ ಬಾರಿಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಎಸ್‌.ರವೀಂದ್ರನಾಥ್‌ ನಿರ್ದೇಶನದ ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ಅವರು ನಟಿಸಿದ್ದಾರೆ.ಈ ಚಿತ್ರವನ್ನು ವಿಖ್ಯಾತ್‌ ನಿರ್ಮಾಣ ಮಾಡಿದ್ದಾರೆ.

ಗುರು–ಶಿಷ್ಯರು ಕನ್ನಡದಲ್ಲಿ ಕೊಕ್ಕೊ ಕ್ರೀಡೆ ಮೇಲೆ ನಿರ್ಮಾಣವಾದ ಚಿತ್ರ.ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಶರಣ್‌ ಹಾಗೂ ತರುಣ್‌ ಸುಧೀರ್‌ ಅವರ ಲಡ್ಡು ಸಿನಿಮಾ ಹೌಸ್‌ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್‌ ಬ್ಯಾನರ್‌ ಅಡಿ ಚಿತ್ರ ನಿರ್ಮಾಣವಾಗಿದೆ.

ಹಾಸ್ಯ ನಟ ಮಹಾಂತೇಶ, ಕೊಕ್ಕೊ ಕ್ರೀಡಾಪಟುಗಳಾಗಿ ನಟಿಸಿರುವ ಏಕಾಂತ್, ರುದ್ರ, ಉದಯ್, ಹರ್ಷಿತ್‌, ರಕ್ಷಕ್, ಮಣಿಕಂಠ, ಸೂರ್ಯ, ನಟೇಶ್‌, ಸಂದೇಶ್‌ ಚಿತ್ರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT