ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿನೇಳೆಂಟು, ಕೋಳಿ ಎಸ್ರು: ಹೊಸ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ

ಹದಿನೇಳೆಂಟು, ಕೋಳಿ ಎಸ್ರು: ಹೊಸ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ
Published 9 ಜನವರಿ 2024, 18:53 IST
Last Updated 9 ಜನವರಿ 2024, 18:53 IST
ಅಕ್ಷರ ಗಾತ್ರ

ಜ.26ರಂದು ತೆರೆಗೆ ಬರಲಿರುವ ‘ಹದಿನೇಳೆಂಟು’ ಹಾಗೂ ‘ಕೋಳಿ ಎಸ್ರು’ ಸಿನಿಮಾಗಳು ಒಟ್ಟಾಗಿ ಪ್ರಚಾರಕ್ಕೆ ಇಳಿದಿದ್ದು, ಎರಡೂ ಸಿನಿಮಾಗಳನ್ನು ₹400 ಟಿಕೆಟ್‍ ಖರೀದಿಸಿ ನೋಡುವ ಪ್ರಯೋಗವನ್ನು ನಿರ್ದೇಶಕಿ ಚಂಪಾ ಶೆಟ್ಟಿ ಹಾಗೂ ನಿರ್ದೇಶಕ ಪೃಥ್ವಿ ಕೊಣನೂರು ಮುಂದಿಟ್ಟಿದ್ದರು.

‘ಈ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈತನಕ ಟಿಕೆಟ್‌ ಮಾರಾಟದಿಂದ ₹1.8 ಲಕ್ಷ ಮೊತ್ತ ಸಂಗ್ರಹವಾಗಿದೆ. ಕನಿಷ್ಠ ₹10 ಲಕ್ಷ ಮೌಲ್ಯದ ಟಿಕೆಟ್‌ ಮಾರಾಟ ಗುರಿಯಿದೆ. ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ‘ಹದಿನೇಳೆಂಟು’ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು.

ಈಗಾಗಲೇ ಎರಡೂ ಚಿತ್ರಗಳು ಸಾಕಷ್ಟು ಚಿತ್ರೋತ್ಸವಗಳಿಗೆ ಆಯ್ಕೆಗೊಂಡು ವಿಮರ್ಶಾ ವಲಯದಿಂದ ಉತ್ತಮ ಪ್ರತಿಕ್ರಿಯೆ ಗಳಿಸಿವೆ. ಜೊತೆಗೆ ಕಳೆದ ವರ್ಷ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದವು. ಚಿತ್ರದ ಟಿಕೆಟ್‌ಗಳು paraspara.live ವೆಬ್‌ಸೈಟ್‌ನಲ್ಲಿ ಲಭ್ಯ ಇವೆ.

‘ಈ ರೀತಿ ಕಲಾತ್ಮಕ ಚಿತ್ರಗಳ ಪ್ರಚಾರಕ್ಕೆ ಖರ್ಚು ಮಾಡುವ ಸ್ಥಿತಿಯಿಲ್ಲ. ನಮ್ಮ ಶ್ರಮವೇ ಬಂಡವಾಳ. ಮಲ್ಟಿಪ್ಲೆಕ್ಸ್‌ಗಳಿರುವ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಹೋಗಿ ಪ್ರಚಾರ ನಡೆಸುತ್ತಿದ್ದೇವೆ. ಉಡುಪಿ, ಮೈಸೂರಿನಲ್ಲಿ ಟಿಕೆಟ್‌ ಪ್ರತಿಕ್ರಿಯೆ ಉತ್ತಮವಾಗಿದೆ. ಕೆಲವರು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಎರಡೂ ಸಿನಿಮಾ ತಂಡಗಳು ಒಟ್ಟಾಗಿ ಪ್ರಚಾರಕ್ಕೆ ಇಳಿದಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ’ ಎನ್ನುತ್ತಾರೆ ‘ಕೋಳಿ ಎಸ್ರು’ ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT