ಪ್ಲಾಸ್ಟಿಕ್‌ ಸರ್ಜರಿ ಹಂಸಿಕಾ ಸರದಿ

ಗುರುವಾರ , ಜೂಲೈ 18, 2019
29 °C

ಪ್ಲಾಸ್ಟಿಕ್‌ ಸರ್ಜರಿ ಹಂಸಿಕಾ ಸರದಿ

Published:
Updated:
Prajavani

ಕನ್ನಡ, ತೆಲುಗು, ಮಲಯಾಳಿ ಬಿಗ್‌ ಬಜೆಟ್‌ ಚಿತ್ರಗಳಲ್ಲಿ ನಟಿಸಿದ್ದ ಬೆಡಗಿ ಹಂಸಿಕಾ ಮೋಟ್ವಾನಿ ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಹಂಸಿಕಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಗುಲ್ಲು ಎದ್ದಿದೆ. ಶಶ್ತ್ರಚಿಕಿತ್ಸೆಯಿಂದ ಎಡವಟ್ಟು ಆಗಿಲ್ಲ. ಮೊದಲಿಗಿಂತ ಹಂಸಿಕಾ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ‘ನನಗೆ ಪ್ಲಾಸ್ಟಿಕ್‌ ಸರ್ಜರಿ ಅಗತ್ಯವಿಲ್ಲ. ನಾನು ಯಾವುದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ’ ಎಂದು ಹಂಸಿಕಾ ಹೇಳಿದ್ದಾರೆ.

2003ರಲ್ಲಿ ಹೃತಿಕ್‌ ರೋಶನ್‌ ಅಭಿನಯದ ‘ಕೋಯಿ ಮಿಲ್‌ ಗಯಾ’ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಹಂಸಿಕಾ ದೊಡ್ಡ ಹೆಸರು ಮಾಡಿದ್ದು ಮಾತ್ರ ದಕ್ಷಿಣ ಭಾರತದ ಚಿತ್ರಗಳಲ್ಲಿ.

Post Comments (+)