ಶನಿವಾರ, ಸೆಪ್ಟೆಂಬರ್ 18, 2021
30 °C

ಆಗಸ್ಟ್‌ನಲ್ಲಿ ಬರಲಿದ್ದಾನೆ ‘ಹಿಟ್ಲರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸ ಪ್ರತಿಭೆಗಳ ಚಿತ್ರ ‘ಹಿಟ್ಲರ್‌’ ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದೆ. ಗಾನಶಿವ ಮೂವೀಸ್ ಈ ಚಿತ್ರ ನಿರ್ಮಿಸುತ್ತಿದೆ. ಮಮತಾ ಲೋಹಿತ್ ನಿರ್ಮಾಪಕರು.

ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಚಿತ್ರದ ಸಂಭಾಷಣೆಯ ತುಣುಕೊಂದನ್ನು ಯುಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಅದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಇತ್ತೀಚೆಗೆ ನಟ ಶಿವರಾಜ್‌ಕುಮಾರ್ ಅವರು ಚಿತ್ರದ ತುಣುಕುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಭೂಗತಲೋಕಕ್ಕೆ ಬಂದ ಅನಾಥ ಹುಡುಗನೊಬ್ಬ ಮುಂದೆ ಸರಿದಾರಿಗೆ ಬರಲು ಯತ್ನಿಸುತ್ತಾನೆ. ಆಗ ಎದುರಾಗುವ ತೊಡಕುಗಳು ಏನು ಮತ್ತು ಅದನ್ನು ಅವನು ಹೇಗೆ ನಿಭಾಯಿಸುತ್ತಾನೆ ಎಂಬುದು ಚಿತ್ರದ ಸಾರಾಂಶ. ಕಿನ್ನಾಳರಾಜ್‌ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಇದೆ.

ನಾಯಕಿ ಸಸ್ಯ, ಮನಮೋಹರ್‌ ರೈ, ಬಲರಾಜವಾಡಿ, ವೈಭವ್‌ ನಾಗರಾಜ್, ವಿಜಯ್‌ ಚಂಡೂರ್, ಶಶಿಕುಮಾರ್, ವೇದಹಾಸನ್, ಗಣೇಶ್‌ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸಂಗೀತ ಆಕಾಶ್‌ಪರ್ವ, ಛಾಯಾಗ್ರಹಣ ಜಿ.ವಿ.ನಾಗರಾಜ್‌ ಕಿನ್ನಾಳ, ಸಂಕಲನ ಗಣೇಶ್‌ ತೋರಗಲ್, ಸಾಹಸ ಚಂದ್ರುಬಂಡೆ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು