ಭಾನುವಾರ, ಸೆಪ್ಟೆಂಬರ್ 19, 2021
28 °C

ಈ ಹಾಲಿವುಡ್‌ ನಟ ಭಾರತೀಯ ಚಿತ್ರಗಳ ಫ್ಯಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌’ ಸರಣಿಯ ಇತ್ತೀಚಿನ ಚಿತ್ರ ‘ಹಾಬ್ಸ್ & ಶಾ’ ಮತ್ತು ‘ಪೋಕೆಮಾನ್‌’ ಚಿತ್ರದ ಪಿಕಾಚು ಡಿಟೆಕ್ಟಿವ್‌ ಪಾತ್ರದ ಮೂಲಕ ಮನೆ ಮಾತಾದ ಹಾಲಿವುಡ್‌ ನಟ ರಾಯ್ನ್ ರೆನಾಲ್ಡ್ಸ್‌ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಹಾಲಿವುಡ್‌ನ ಅನೇಕ ಹಿಟ್‌ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರೆನಾಲ್ಡ್ಸ್‌ ಮೂಲತಃ ಕೆನಡಾ ಸಂಜಾತ. ಚಾರ್ಮಿಂಗ್‌ ಲುಕ್‌ನಿಂದ ಸೆಕ್ಸಿ ನಟ ಎಂದು ಗುರುತಿಸಿಕೊಂಡಿರುವ ರೆನಾಲ್ಡ್ಸ್‌ ಈಚೆಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಭಾರತೀಯ ಚಿತ್ರರಂಗದ ಬಗ್ಗೆ ಹಾಡಿ ಹೊಗಳಿದ್ದಾರೆ.

‘ನಾನು ಭಾರತೀಯ ಸಿನಿಮಾಗಳ ದೊಡ್ಡ ಅಭಿಮಾನಿ. ಚಿಕ್ಕ ವಯಸ್ಸಿನಲ್ಲೇ ಅಲ್ಲಿಯ ಅನೇಕ ಚಿತ್ರಗಳನ್ನು ವೀಕ್ಷಿಸಿದ್ದೆ. ಹೀಗಾಗಿ ನನ್ನ ಮೇಲೆ ಭಾರತೀಯ ಚಿತ್ರಗಳ ಪ್ರಭಾವವಿದೆ’ ಎಂದು ಹೇಳಿಕೊಂಡಿದ್ದಾರೆ. ಜತೆಗೆ ವಿಶ್ವ ಚಿತ್ರರಂಗಕ್ಕೆ ಭಾರತೀಯ ಚಿತ್ರಗಳ ಕೊಡುಗೆ ಕೂಡ ಅಪಾರ ಎಂದು ಕೊಂಡಾಡಿದ್ದಾರೆ.

ಭಾರತಕ್ಕೆ ಭೇಟಿ ನೀಡುವ ಬಹು ದಿನಗಳ ಕನಸನ್ನು ಅವರು ಸಂದರ್ಶನದ ವೇಳೆ ಹಂಚಿಕೊಂಡಿದ್ದಾರೆ. ‘ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರಿರುವ ಕಾರಣ ನನಗೆ ಭಾರತೀಯ ಸಂಸ್ಕೃತಿಯ ಪರಿಚಯವಿದೆ. ಆದರೆ, ಭಾರತಕ್ಕೆ ಬಂದು ಅಲ್ಲಿಯ ಆಹಾರ,ವಿಚಾರ ಮತ್ತು ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳುವ ತವಕವಿದೆ’ ಎಂದು ಮನದ ಇಂಗಿತವನ್ನು ತೆರೆದಿಟ್ಟಿದ್ದಾರೆ.

ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ದುಡ್ಡು ಬಾಚಿಕೊಂಡ ‘ ಪರ್ಲ್‌ ಹಾರ್ಬರ್‌’ ಮತ್ತು ‘ಟ್ರಾನ್ಸ್‌ಫಾರ್ಮರ್‌’ ಥ್ರಿಲ್ಲರ್‌ ಚಿತ್ರಗಳ ನಿರ್ದೇಶಕ ಮೈಕೆಲ್‌ ಬೇ ನಿರ್ದೇಶನದ ‘6 ಅಂಡರ್‌ಗ್ರೌಂಡ್‌’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು